ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ “ಬಣಕಲ್ ನ್ಯೂಸ್” ವತಿಯಿಂದ ಅಟೋ ರಿಕ್ಷಾ ಹಿಂದೆ ಓಡಿಸುವ (ರಿವರ್ಸ್) ಸ್ಪರ್ಧೆ. ಮೊಸರು ಕುಡಿಕೆ.ಹಾಗೂ ಮಕ್ಕಳ ಕೃಷ್ಣ ವೇಷ ಸ್ಪರ್ಧೆಯನ್ನು ಸೆ.3ರಂದು (ಭಾನುವಾರ) ಆಯೋಜನೆ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲೇ ಪ್ರಪ್ರಥಮವಾಗಿ ಬಣಕಲ್ ನಲ್ಲಿ ಆಟೋ ರಿವರ್ಸ್ ರೇಸ್ ಸ್ಪರ್ಧೆಯನ್ನು ಬಣಕಲ್ ನ್ಯೂಸ್ ತಂಡ ಪರಿಚಯಿಸುತ್ತಿದೆ. ನಾವು ಯಾವುದೇ ಊರಿಗೆ ಹೋದರೂ ಅಲ್ಲಿ ಆಟೋ ರಿಕ್ಷಾ ಸಂಚಾರ ಇಲ್ಲದೆ ಇರೋ ಊರು ಕಾಣಲು ಸಾಧ್ಯವಿಲ್ಲ. ಹಾಗೆಯೇ ಪ್ರಯಾಣಿಕರನ್ನು ಕರೆದುಕೊಂಡು ಹೋಗುವಾಗ ಒಟ್ಟೊಟ್ಟಿಗೆ ಎರಡು ರಿಕ್ಷಾಗಳು ಒಂದಾದರೇ ನಾ ಮುಂದೆ, ತಾ ಮುಂದು ಎಂಬಂತೆ ಸ್ಪರ್ಧೆಗೆ ಮುಂದಾಗುತ್ತಾ ನೇರವಾಗಿ ಹೋಗುವುದನ್ನು ನಾವು ನೋಡಿದ್ದೇವೆ.ಆದರೆ ಇಲ್ಲಿ ಆಟೋ ಹಿಮ್ಮುಖವಾಗಿ ಓಡಿಸುವ ಸ್ಪರ್ಧೆ ಆಯೋಜನೆ ಆಗಿದೆ.
ಬಣಕಲ್ ನ್ಯೂಸ್ ತಂಡ ವಿಭಿನ್ನವಾಗಿ ಸ್ಪರ್ಧೆಯನ್ನು ಆಯೋಜನೆ ಮಾಡಿದೆ.ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಆಟೋಗಳು ರಿವರ್ಸ್ ಗೇರ್ನಲ್ಲಿ ಸಂಚರಿಸಬೇಕಾಗಿದೆ. ಹೀಗಾಗಿ ಚಾಲಕರು ರಿವರ್ಸ್ ಗೇರ್ನಲ್ಲಿ ಆಟೋ ಓಡಿಸುತ್ತಾ, ರೇಸ್ನಲ್ಲಿ ಭಾಗವಹಿಸಬೇಕು.
ಸೆಪ್ಟೆಂಬರ್ 3ನೇತಾರೀಕು ಭಾನುವಾರದಂದು ಬಣಕಲ್ ಗ್ರಾಮದಲ್ಲಿ ಸ್ಪರ್ಧೆ ಆಯೋಜನೆಯಾಗಿದೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಬೇಕಾಗಿ ಬಣಕಲ್ ನ್ಯೂಸ್ ತಂಡ ಕೇಳಿ ಕೊಳ್ಳುತ್ತಿದೆ.
✍️ವರದಿ :ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ