ಬಣಕಲ್ :ಸಾಧಬ್ ಹುಸೇನ್ ಹೆಸರು ನೆನಪಿಗೆ ಬಂದಾಗ, ಹೆಚ್ಚಿನ ಆಧುನಿಕ ಕ್ರೀಡಾಭಿಮಾನಿಗಳಿಗೆ ಅವರು ಯಾರೆಂಬುದರ ಸುಳಿವು ಇರುವುದಿಲ್ಲ. ಆದರೆ ವಾಲಿಬಾಲ್ ಅನ್ನು ಅನುಸರಿಸುವವರಿಗೆ ಮತ್ತು ಬೆಳೆಯುತ್ತಿರುವವರಿಗೆ, ಈ ಹೆಸರು ಸ್ವರಮೇಳವನ್ನು ಹೊಡೆಯುತ್ತದೆ.
ಬಣಕಲ್ ಅಲಿಫ್ ಸ್ಟಾರ್ ವಾಲಿಬಾಲ್ ತಂಡದ ಸಹ ಆಟಗಾರ.ಚಿಕ್ಕಮಗಳೂರು ಜಿಲ್ಲೆಯ ಮಲ್ಲಂದೂರಿನ ಸಾಧಬ್ ಹುಸೈನ್ ಎಂಬ ಯುವಕ ಕಳೆದವಾರ ನಡೆದ ರಸ್ತೆ ಅಪಘಾತದಲ್ಲಿ ತೀವ್ರ ಪೆಟ್ಟಾಗಿ ಕೋಮಾ ಸ್ಥಿತಿಗೆ ತಲುಪಿದ್ದರು . ಆದರೇ ದುರದೃಷ್ಟವಶಾತ್ ಈದಿನ ಇಹಲೋಕ ತ್ಯಜಿಸಿದ್ದಾರೆ. ಪ್ರತಿಭಾವಂತ ವಾಲಿಬಾಲ್ ಆಟಗಾರನನ್ನು ಕಳೆದುಕೊಂಡಿರುವುದು ದುಃಖಕರ ವಿಷಯ ಎಂದು ರಶೀದ್ ರವರು ತಿಳಿಸಿದರು.ದೇವರು ಅವರ ಆತ್ಮಕೆ ಶಾಂತಿ ದೊರಕುವಂತೆ ಮಾಡಲಿ ಹಾಗೆ ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ದುಃಖ ವ್ಯಕ್ತಪಡಿಸಿದರು.ನಾಳೆ ಅವರ ಸ್ವಗೃಹದಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ.
ವರದಿ :ಸೂರಿ ಬಣಕಲ್