ಬಣಕಲ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಸರ್ಕಾರಿ ಮತ್ತು ಅರೆ ಸರ್ಕಾರಿ ಕಚೇರಿಗಳಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಯುಕ್ತ ಸಡಗರ-ಸಂಭ್ರಮದಿಂದ ಧ್ವಜಾರೋಹಣ ನೆರವೇರಿಸಲಾಯಿತು. ಬಣಕಲ್ ನ ಕನ್ನಡ ಮಾಧ್ಯಮ ಶಾಲೆ, ಉರ್ದು ಶಾಲೆ, ಪ್ರೌಢ ಶಾಲೆ, ವಿದ್ಯಾಭಾರತಿ, ಹಾಗೂ ರಿವರ್ ವ್ಯೂ ಶಾಲಾ ಮಕ್ಕಳ ಆಕರ್ಷಕ ಪಥಸಂಚಲನ ಬಣಕಲ್ ರಾಜಬೀದಿಯಲ್ಲಿ ಸಾಗಿತ್ತು.ನೂರಾರು ಮಕ್ಕಳು ಒಕ್ಕೊರಳಿನಿಂದ ಭಾರತ್ ಮಾತಾಕಿ ಜೈ ಎಂಬ ಘೋಷಣೆ ಕೂಗುತ್ತ ಸಾಗುತ್ತಿರುವುದು ನೋಡುಗರ ಮನಸೂರೆಗೊಂಡಿತು. ಸಾರ್ವಜನಿಕರು ಮಕ್ಕಳು ಸೇರಿದಂತೆ ಪ್ರತಿಯೊಬ್ಬರೂ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿರುವುದು ಇನ್ನಷ್ಟು ಮೆರಗು ತಂದಿತು.ವರದಿ: ✍️ಸೂರಿ ಬಣಕಲ್
