ಬಣಕಲ್ :ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಬಣಕಲ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಸ್ಲೋ ಬೈಕ್ ರೇಸ್. ಮ್ಯೂಸಿಕಲ್ ಚೇರ್. ರನ್ನಿಂಗ್ ರೇಸ್. ಕಾರ್ ರೇಸ್ ಹೀಗೆ ಹಲವು ಸ್ಪರ್ಧೆಗಳನ್ನು ಆಯೋಜನೆ ಮಾಡಿದ್ದರು. ಅದೆಲ್ಲದಕ್ಕೂ ವಿಭಿನ್ನ ವಾಗಿ ರಿವರ್ಸ್ ಕಾರ್ ರೇಸ್ ಆಯೋಜನೆ.ನೀವು ಎತ್ತಿನ ಗಾಡಿ ಓಟದ ಸ್ಪರ್ಧೆ ಕುದುರೆ ಓಟದ ಸ್ಪರ್ಧೆ ಮಣ್ಣು ರಸ್ತೆಯಲ್ಲಿ ಕಾರಿನ ರೇಸ್ ಮುಂತಾದ ಸ್ಪರ್ಧೆಗಳನ್ನು ಸಾಕಷ್ಟು ನೋಡಿರುತ್ತೀರಿ. ಆದರೆ ವಾಹನವನ್ನು ಹಿಂದಕ್ಕೆ ಓಡಿಸುವುದನ್ನು ಎಲ್ಲಾದರು ನೋಡಿದ್ದೀರಾ ಬಣಕಲ್ ನಲ್ಲಿ ಫ್ರೆಂಡ್ಸ್ ಕ್ಲಬ್ ನ ಸ್ನೇಹಿತರು ಅದನ್ನು ಬಣಕಲ್ ನಲ್ಲಿ ರಿವರ್ಸ್ ಕಾರ್ ರೇಸ್ ಆಯೋಜನೆ ಮಾಡಿ ನೋಡುಗರಿಗೆ ರಸದೌತಣ ಉಣಬಡಿಸಿದ್ದಾರೆ.ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಫ್ರೆಂಡ್ಸ್ ಕ್ಲಬ್ ವತಿಯಿಂದ ಬಣಕಲ್ ಹೈಸ್ಕೂಲ್ ನಲ್ಲಿ ಕಾರ್ ರಿವರ್ಸ್ ಓಡಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಕಾರ್ ಚಾಲಕರು ತಮ್ಮ ಕಾರುಗಳನ್ನು ಮಣ್ಣು ರಸ್ತೆಗಳಲ್ಲಿ ವೇಗವಾಗಿ ಹಿಂದಕ್ಕೆ ಓಡಿಸುವ ಮೂಲಕ ಎಲ್ಲರ ಗಮನ ಸೆಳೆದರು. ಮಂಗಳವಾರ ಈ ಸ್ಪರ್ಧೆ ಆಯೋಜಿಸಲಾಗಿತ್ತು. ಬಣಕಲ್ ಗ್ರಾಮದಲ್ಲಿ ಸ್ವಾತಂತ್ರೋತ್ಸವದ ಅಂಗವಾಗಿ ಈ ಸ್ಪರ್ಧೆಯನ್ನು ಸಂಘಟಕರು ಆಯೋಜಿಸಿದ್ದರು. ಈ ಸ್ಪರ್ಧೆಯಲ್ಲಿ ಕಾರ್ ಚಾಲಕರ ಹುರುಪಿನ ಚಾಲನೆಯನ್ನು ನೋಡಲು ಮಣ್ಣು ರಸ್ತೆಯ ಉದ್ದಕ್ಕೂ ಸಾವಿರಾರು ಜನ ನಿಂತುಕೊಂಡು ಸೀಳೆ ಹೊಡೆದು ಬೊಬ್ಬೆ ಹಾಕಿ ಚಾಲಕರನ್ನು ಪ್ರೋತ್ಸಾಹಿಸುತ್ತಿರುವುದು ಕಾಣುತ್ತಿತ್ತು. ರಿವರ್ಸ್ ಗೇರ್ನಲ್ಲಿ ಚಾಲನೆ ಮಾಡಬೇಕಿದ್ದ ಕಾರ್ ರೇಸ್ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸ್ಪರ್ಧಿಗಳು ಭಾಗವಹಿಸಿದ್ದರು. ಹಿಮ್ಮುಖವಾಗಿ ಚಾಲನೆ ಮಾಡುವಾಗ ಅತಿಯಾದ ಜಾಗರೂಕತೆ ಜತೆಗೆ ನೈಪುಣ್ಯತೆ ಇದ್ದಾಗ ಮಾತ್ರ ಯಶಸ್ವಿಯಾಗಲು ಸಾಧ್ಯವಾಗುತ್ತದೆ. ಅದರಂತೆ ಈ ಸ್ಪರ್ಧೆಯಲ್ಲಿ ಕೆಲ ಚಾಲಕರು ಗುರಿ ಮುಟ್ಟುವಲ್ಲಿ ಯಶಸ್ವಿಯಾದರೆ, ಇನ್ನು ಕೆಲವರು ಎಡವಿದ್ದಾರೆ. ಸ್ಪರ್ಧೆಯನ್ನು ವೀಕ್ಷಿಸಲು ಹಲವು ಗ್ರಾಮಸ್ಥರು ಆಗಮಿಸಿ ಸ್ಪರ್ಧಾಳುಗಳಿಗೆ ಹುರಿದುಂಬಿಸಿದ ದೃಶ್ಯ ಕಣ್ಣಿಗೆ ಕಾಣ ಸಿಕ್ಕಿತು. ಫ್ರೆಂಡ್ಸ್ ಕ್ಲಬ್ ಆಯೋಜಿಸಿದ ಸ್ಪರ್ಧೆ ಯಶಸ್ವಿಯಾಗಿ ನೆರವೇರಿತು. ಅಧ್ಯಕ್ಷರು ಹಾಗೂ ಸದಸ್ಯರ ಪರಿಶ್ರಮ ಯಶಸ್ಸು ಕಂಡಿತು. ಕಾರ್ ರೇಸ್ :ಮಹೇಂದ್ರ, ಮೊದಲ ಬಹುಮಾನ.ಅರುಣ್ ಪೂಜಾರಿ, ಎರಡನೇ ಬಹುಮಾನ. ಆರ್ಭಜ್ ಖಾನ್, ಮೂರನೇ ಬಹುಮಾನ. ಬೈಕ್ ರೇಸ್ :ಇಮ್ರಾನ್, ಮೊದಲ ಬಹುಮಾನ.ದರ್ಶಿತ್, ಎರಡನೇ ಬಹುಮಾನ. ಆಶಿಫ್, ಮೂರನೇ ಬಹುಮಾನ.
✍️ವರದಿ ಸೂರಿ ಬಣಕಲ್