ಬಿ. ಹೊಸ ಹಳ್ಳಿಯಲ್ಲಿ ಹಿಂದು ಮುಸ್ಲಿಂ ಭಾವೈಕ್ಯತೆಯ ಮೊಹರಂ ಸಂಭ್ರಮ..!

ಬಣಕಲ್ : ಇಂದು ದೇಶದೆಲ್ಲಡೆ  ಮುಸ್ಲಿಂ ಬಾಂಧವರು  ತ್ಯಾಗ, ಬಲಿದಾನದ ಸಂಕೇತದ ಪ್ರತೀಕವಾದ ಮೊಹರಂ ಹಬ್ಬವನ್ನು ಆಚರಿಸಿದರು.ರಂಜಾನ್ ನಂತರ ಮೊಹರಂನ್ನು ಇಸ್ಲಾಮಿಕ್ ಕ್ಯಾಲೆಂಡರ್ ನ ಪವಿತ್ರ ತಿಂಗಳು ಎಂದು ಪರಿಗಣಿಸಲಾಗಿದೆ. ಮೊಹರಂ ಇಸ್ಲಾಂನಲ್ಲಿ ಅಪಾರ ಪ್ರಾಮುಖ್ಯತೆ ಹೊಂದಿರುವ ತಿಂಗಳು ಮತ್ತು ಮುಸ್ಲಿಂ ಸಮುದಾಯದವರು ಆಚರಿಸುವ ಪವಿತ್ರ ತಿಂಗಳುಗಳಲ್ಲಿ ಇದು ಸಹ ಒಂದು.ಹಿಂದೂ-ಮುಸ್ಲಿಮರ ಭಾವೈಕ್ಯತೆ ಸಾರುವ ಹಬ್ಬ ಮೊಹರಂ, ಯಾವುದೇ ತಾರತಮ್ಯವಿಲ್ಲದೆ ಸರ್ವಧರ್ಮೀಯರು ಪಾಲ್ಗೊಂಡು ಹಬ್ಬ ಆಚರಿಸುತ್ತಾರೆ ಇಂದು ಮೊಹರಂ ಆಚರಣೆಯನ್ನು ಮೂಡಿಗೆರೆ ತಾಲ್ಲೂಕ್ಕಿನ ಬಿ. ಹೊಸ ಹಳ್ಳಿಯಲ್ಲಿ ವಿಶೇಷವಾಗಿ ಆಚರಿಸಲಾಯಿತು.ನೂರಾರು ವರ್ಷಗಳಿಂದ ಊರ ಹಬ್ಬದಂತೆ ಮೊಹರಂ ಆಚರಿಸುತ್ತಾ ಬರುವ ಮೂಲಕ ಭಾವೈಕ್ಯ ಮೆರೆದಿದ್ದಾರೆ .*ವರದಿ:ಸೂರಿ ಬಣಕಲ್*