ಆರ್ಡರ್ ಮಾಡಿದ್ದು ಒಂದು ಸಿಕ್ಕಿದ್ದು ಚಿಂದಿ ಬಟ್ಟೆ ಇಲ್ಲಿದೆ ಆನ್ಲೈನ್ ವಂಚನೆಯೊಂದರ ಕಥೆ

ಬಣಕಲ್ :ಫೇಸ್ ಬುಕ್ ಅಪ್ ನಲ್ಲೂ ನೀವು ವ್ಯವಹಾರ ನಡೆಸಬಹುದು.ನಿಮಗಿಷ್ಟವಾಗಿದನ್ನು ಆರ್ಡರ್ ಮಾಡಿ ಕೊಂಡುಕೊಳ್ಳಬಹುದು ಎಂಬ ಜಾಹಿರಾತನ್ನು ನೋಡಿ ಬಸನಿ ಗ್ರಾಮದ ಅನಿಲ ಎಂಬುವವರು ಇ ಕಾರ್ಟ್ ಎಂಬ ಲಿಂಕನ್ನು ಓಪನ್ ಮಾಡಿದ್ದಾರೆ 1000rs ಬೆಲೆಗೆ ಉತ್ತಮ ಗುಣಮಟ್ಟದ ಜೋಡಿ ಶರ್ಟ್ ಆಫರ್ ಇದ್ದಿದರಿಂದ ನೋಡಿ ಇಷ್ಟವಾಗಿ ಖರೀದಿ ಮಾಡಲು ಮುಂದಾಗಿದ್ದಾರೆ.ಆರ್ಡರ್ ಮಾಡಿ ಗೂಗಲ್ ಪೇ ಮೂಲಕ ಪೇಮೆಂಟ್ ಕೂಡ ಮಾಡಿದ್ದಾರೆ. ಆದರೆ ಆರ್ಡರ್ ಬಂದಾಗ ಆನ್​​ಲೈನ್​ನಲ್ಲಿ ಆತ ಬುಕ್​ ಮಾಡಿದ್ದೇ ಒಂದು ಆದರೆ ಆನ್​ಲೈನ್​ ಕಂಪೆನಿ ಪಾರ್ಸೆಲ್​ ಕಳಿಸಿದ್ದೆ ಇನ್ನೊಂದು..ಇವತ್ತು ಪಾರ್ಸಲ್ ಬಂದಾಗ ಯಾಕೋ ಅನುಮಾನ ಗೊಂಡು ತಕ್ಷಣವೇ ಕಿರಣ್ ರಾಜ್ ಎಂಬುವವರು ಅದನ್ನು ಓಪನ್​ ಮಾಡಿದ್ದಾರೆ. ಓಪನ್ ಮಾಡಿದವರಿಗೆ ಆಶ್ಚರ್ಯ ಕಾದಿತ್ತು. ಆನ್​ಲೈನ್ ನಲ್ಲಿ ಬಂದ ಕೊರಿಯರ್ ಪಾರ್ಸಲ್ ನೋಡಿ ಈ ಗ್ರಾಹಕ ಬೆಚ್ಚಿ ಬಿದ್ದಿದ್ದಾರೆ.ಗುಣಮಟ್ಟದ ಶರ್ಟ್ ನ ಬದಲು ಬಂದಿದ್ದು ಹರಿದ ಬಟ್ಟೆ. ಇದರಿಂದ ಕುಪಿತಗೊಂಡ ಅವರು ಡೆಲಿವರಿ ಹುಡುಗನಿಂದ ಹಣವನ್ನು ವಾಪಾಸ್ ಪಡೆದಿದ್ದಾರೆ. ಹರಿದ ಚಿಂದಿ ಬಟ್ಟೆಗಳನ್ನು ಪ್ಯಾಕ್ ಮಾಡಿ ಕಳುಹಿಸಿದ ಇ ಕಾರ್ಟ್ ಎಂಬ ಮಾರ್ಕೆಟಿಂಗ್ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಆನ್​ಲೈನ್​ ಶಾಪಿಂಗ್​ ವಂಚನೆ ಪ್ರಕರಣಗಳು ಒಂದಾದ ಮೇಲೊಂದರಂತೆ ನಡೆಯುತ್ತಲೇ ಇದೆ. ಒಂದೆಡೆ ಮಳಿಗೆಗಳಿಗಿಂತ ಕಡಿಮೆ ಬೆಲೆಗೆ ವಸ್ತುಗಳನ್ನು ನೀಡುವ ಆನ್​ಲೈನ್​ ಶಾಪಿಂಗ್​ ತಾಣಗಳು ಒಳ್ಳೆಯದು ಅನಿಸಿದರೆ, ಈ ರೀತಿಯ ಘಟನೆಗಳು ಆನ್​ಲೈನ್​ ಮೇಲಿರುವ ನಂಬಿಕೆಗೆ ಅಡ್ಡಗಾಲಾಗಿದೆ.*ವರದಿ :ಸೂರಿ ಬಣಕಲ್*