ಬಣಕಲ್: ಆಂಗ್ಲ ಮಾಧ್ಯಮ ರಿವರ್ ವ್ಯೂ ಶಾಲೆಯಲ್ಲಿ ಫ್ಯಾನ್ಸಿ ಡ್ರೆಸ್ ಸ್ಪರ್ಧೆ

ಬಣಕಲ್ ರಿವರ್ವ್ಯ್ ಶಾಲೆಯಲ್ಲಿ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯನ್ನು ಎಲ್ಕೆಜಿ ಮತ್ತು ಯು.ಕೆ.ಜಿ ಮಕ್ಕಳಿಗೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಲ್ಲಾ ವಿದ್ಯಾರ್ಥಿಗಳ ಮನ ಮೋಹಕ ಉಡುಪುಗಳು ನೋಡುಗರ ಕಣ್ಮಣ ಸೆಳೆಯಿತು. ಈ ಸ್ಪರ್ಧೆಗೆ ತೀರ್ಪುಗಾರರಾಗಿ ನಾಗೇಶ್ ಮೂಡಿಗೆರೆ, ಕುಮಾರಿ ದಿವ್ಯಾ, ಚೇತನ್ ಕುಮಾರ್ ಇದ್ದರು. ಎಲ್ಕೆಜಿ ಮತ್ತು ಯುಕೆಜಿ ಮಕ್ಕಳ ಮುಖ್ಯ ಶಿಕ್ಷಕಿಯರಾದ ಆಸಿಯ ಮತ್ತು ರಂಜಿನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ರಿವರ್ ವ್ಯೂ ಶಾಲೆಯ ಅಧ್ಯಕ್ಷರಾದ ಮೊಹಮ್ಮದ್ ಇಮ್ರಾನ್, ಶಾಲೆಯ ಮುಖ್ಯ ಶಿಕ್ಷಕರಾದ ಶಿವಮೂರ್ತಿ ಎಚ್.ಎಂ. ಮತ್ತು ಪೋಷಕರು ಭಾಗವಹಿಸಿದ್ದರು ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳ ವಿವರLkG ಪ್ರಥಮ ಸ್ಥಾನ: ಲಿಯಾ ಫಾತಿಮಾ ದ್ವಿತೀಯ ಸ್ಥಾನ: ಪೂರ್ವಿ ಎಲ್ ತೃತೀಯ ಸ್ಥಾನ : ಮಹಮ್ಮದ್ ರಿಫಾಜ್UKG ಪ್ರಥಮ ಸ್ಥಾನ: ಆದಿತ್ಯ ಟಿ.ಎಸ್.ದ್ವಿತೀಯ ಸ್ಥಾನ :ದಿಯಾ ಫಾತಿಮಾ ತೃತೀಯ ಸ್ಥಾನ: ಅನವಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದಂತಹ ಎಲ್ಲಾ ವಿದ್ಯಾರ್ಥಿಗಳಿಗೂ ಸಮಾಧಾನಕರ ಬಹುಮಾನವನ್ನು ನೀಡಲಾಯಿತು.