ಬಣಕಲ್: ಮಳೆಗಾಲದ ಸಂದರ್ಭದಲ್ಲಿ ಕೊಚ್ಚಿ ಹೋಗಿದ್ದ ಕೆಂಬಲ್ ಮಠ ರಸ್ತೆಯ ತಡೆಗೋಡೆಗಳ ಪ್ರಗತಿಯಲ್ಲಿರುವ ಕಾಮಗಾರಿಯನ್ನು ಶಾಸಕರಾದ ಎಂಪಿ ಕುಮಾರಸ್ವಾಮಿ ವೀಕ್ಷಣೆ ಮಾಡಿದರು 3 ವರ್ಷಗಳ ಹಿಂದೆ ಮಳೆಯಿಂದಾಗಿ ಬಣಕಲ್ ನ ಕೆಂಬಲ್ ಮಠದಲ್ಲಿ ರಸ್ತೆ ಕುಸಿತಗೋಂಡಿತ್ತು ಮಳೆಯಲ್ಲಿ ಸುರಿಯುವ ನೀರು ಇಳಿಜಾರು ಪ್ರದೇಶಕ್ಕೆ ಹರಿಯುತ್ತ ಹೋಗುತಿತ್ತು. ಹೀಗೆ ಮಳೆ ನೀರು ರಭಸವಾಗಿ ಹೋಗುವಾಗ ಮಣ್ಣಿನ ಸವಕಳಿಯನ್ನು ಮಾಡುತ್ತ ಹೋಗುತಿತ್ತು . ಹೀಗಾಗುವುದರಿಂದ ಕೆಳಭಾಗದಲ್ಲಿರುವ ಲಕ್ಷ್ಮಣ್ ರವರ ಮನೆಗಳ ಅಡಿಪಾಯಕ್ಕೆ ಧಕ್ಕೆ ತಂದೊಡ್ಡುತಿತ್ತು.ಮಳೆಗಾಲದಲ್ಲಿ ತೀವ್ರ ತೊಂದರೆ ಅನುಭವಿಸುತಿದ್ದರು
ಇದರಿಂದ ಮನೆಗೆ ಅಪಾಯ ಅಪಾಯವಾಗುವ ಸಂಭವವಿತ್ತು.ಮುಂದೆ ಅನಾಹುತ ಆಗುವ ಮುಂಚೆ ತಡೆಗೋಡೆ ನಿರ್ಮಿಸುವಂತೆ ಮನೆ ಮಾಲೀಕ ಲಕ್ಷ್ಮಣ್ ರವರು ಗ್ರಾಮಪಂಚಾಯಿತಿಗೆ ಮನವಿ ಸಲ್ಲಿಸಿದ್ದರು. ಈ ನಿಟ್ಟಿನಲ್ಲಿ ಈಗ ಶಾಸಕರ ಅನುದಾನದಿಂದ 5ಲಕ್ಷ ವೆಚ್ಚದ ತಡೆಗೋಡೆ ನಿರ್ಮಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ
ಇದರ ಅಂಗವಾಗಿ ಕೆಂಬಲ್ ಮಠದ ರಸ್ತೆಯಲ್ಲಿರುವ ಲಕ್ಷ್ಮಣ್ ರವರ ಮನೆ ಮುಂಭಾಗ ರಸ್ತೆಗೆ ತಡೆಗೋಡೆ ನಿರ್ಮಿಸುವ ಕಾಮಗಾರಿಯನ್ನು ಆರಂಭಿಸಿದೆ.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ