ತಾಲೂಕಿನ ಬಣಕಲ್ ಸಮೀಪ ಕಾಡು ಗದ್ದೆ ಎಸ್ಟೇಟ್ ಬಳಿ ಆಟೋ ಚಾಲಕ ಶಶಿ ರವರು ಪ್ರಯಾಣಿಕರನ್ನು ಕುಳ್ಳಿರಿಸಿ ಕೊಂಡು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ರಸ್ತೆ ಬದಿಯಲ್ಲಿ ಕಾಡು ಕೋಣಗಳ ಹಿಂಡು ರಸ್ತೆ ದಾಟುತ್ತಿರುವ ದೃಶ್ಯ ಕಂಡು ಭಯ ಭೀತರಾಗಿದ್ದಾರೆ. ಅದೃಷ್ಟ ವಶಾತ್ ಕಾಡು ಕೋಣಗಳ ಹಿಂಡಿನಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಇತ್ತೀಚ್ಚಿನ ದಿನಗಳಲ್ಲಿ ಈ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಮಿತಿ ಮೀರುತ್ತಿವೆ.
ಹಗಲು ರಸ್ತೆಯಲ್ಲಿ ಸಾಮಾನ್ಯ ಜಾನುವಾರಿನಂತೆ ಓಡಾಡುತ್ತಿದೆ. ಕಾಡುಕೋಣ ರಸ್ತೆಯಲ್ಲಿ ಸುತ್ತಾಡುವುದು ನೋಡಿ ಗ್ರಾಮಸ್ಥರಲ್ಲಿ ಕೂಲಿ ಕಾರ್ಮಿಕರಲ್ಲಿಭಯದ ವಾತಾವರಣ ನಿರ್ಮಾಣವಾಗಿದೆ
ಕಾಡು ಗದ್ದೆ ಮಾರ್ಗದ ತೋಟಗಳ ಬಳಿ ಕೋಣಗಳು ಹಿಂಡು ಹಿಂಡಾಗಿ ಪ್ರತ್ಯಕ್ಷವಾಗುತ್ತಿರುವುದು ಆ ಭಾಗದ ಪ್ರಯಾಣಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ಭಯ ಪಡುವಂತಾಗಿದೆ. ಸುಮಾರು 20ಕ್ಕೂ ಹೆಚ್ಚು ಕೋಣಗಳ ಹಿಂಡು ರಸ್ತೆ ದಾಟುತ್ತಿರುವುದು ಕಂಡು ವಾಹನ ಸವಾರರು ಕಂಗಾಲಾಗಿದ್ದಾರೆ. ಕಾಡು ಕೋಣಗಳು ಹಿಂಡು ಹಿಂಡಾಗಿ ರಸ್ತೆ ಬದಿ ಪ್ರತ್ಯಕ್ಷ ವಾಗುತ್ತಿರುವುದರಿಂದ ಕೂಲಿ ಕಾರ್ಮಿಕರು ಜೀವ ಭಯದಲ್ಲಿ ಕೆಲಸ ಮಾಡುವಂತಾಗಿದೆ.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ