ಬಣಕಲ್ ಗ್ರಾಮ ಪಂಚಾಯಿತಿ ವತಿಯಿಂದ ನಡೆದ ಗ್ರಾಮ ಚದುರಂಗ ಆಟ ಆಡೋಣ ಅಭಿಯಾನ ಕಾರ್ಯಕ್ರಮ ಬಣಕಲ್ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಇಂದು ಬೆಳಗ್ಗೆ ನಡೆಯಿತು.ಆಟ ಆಡೋಣ ಅಭಿಯಾನವು ಎರಡು ವಿಭಾಗಗಳಲ್ಲಿ ನಡೆದಿತ್ತು ಪ್ರಾಥಮಿಕಶಾಲೆ ಹಾಗೂ ಪ್ರೌಢ ಶಾಲೆ ಹೀಗೆ 2 ವಿಭಾಗದಲ್ಲಿ ಸ್ಪರ್ಧೆ ಏರ್ಪಡಿಸಿದ್ದರು ಪ್ರಾಥಮಿಕ ವಿಭಾಗದಲ್ಲಿ ಬಣಕಲ್ ರಿವರ್ ವ್ಯೂ ಶಾಲೆಯ ಆರನೇ ತರಗತಿಯ ವಿದ್ಯಾರ್ಥಿ ಶಕ್ತಿ ದೇವ್ರತ್ ಪ್ರಕಾಶ್ ಎಂಬ ವಿದ್ಯಾರ್ಥಿ ಮೊದಲ ಬಹುಮಾನ ಗಳಿಸಿದರು. ವಿದ್ಯಾರ್ಥಿಗೆ ರಿವರ್ ವ್ಯೂ ಆಡಳಿತ ಮಂಡಳಿ ಶುಭ ಕೋರಿತು
