ಬಣಕಲ್ : ಬಣಕಲ್ ಗ್ರಾಮ ಪಂಚಾಯಿತಿಯ 2022-23ನೇ ಸಾಲಿನ ಮೊದಲನೇ ಗ್ರಾಮ ಸಭೆ ಇಂದು ಬಣಕಲ್ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆಯಿತು. ಮೊದಲ ಸುತ್ತಿನ ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಬಣಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಿ ಬಿ ಲೀಲಾವತಿ ವಹಿಸಿದ್ದರು. ಸಭೆಯಲ್ಲಿ ಅಧಿಕಾರಿಗಳು ಭಾಗವಹಿಸಿ ಯೋಜನೆಗಳನ್ನು ಗ್ರಾಮ ಸಭೆಗೆ ವಿವರಿಸಿದರು.ಸಭೆಯಲ್ಲಿ ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳಲಾಯಿತು.(1)ಹುಲಿ ಮತ್ತು ಆನೆ ಹಾವಳಿಗೆ ಜನ ತತ್ತರಿಸಿರುವುದರಿಂದ ಸ್ಥಳಾಂತರಿಸಲು ಸರ್ಕಾರಕ್ಕೆ ಒತ್ತಾಯ ಮಾಡುವುದು.
(2) ಸರ್ಕಾರದ ಆದೇಶದಂತೆ ಆದಾಯ ಪರಿಷ್ಕರಣೆ ಮಾಡುವುದು
(3) ನಾಲ್ಕು ಚಕ್ರದ ವಾಹನ ಹೊಂದಿರಬಾರದು ಎಂಬ ಕಾನೂನನ್ನು ಹಿಂಪಡೆಯಲು ಸರ್ಕಾರಕ್ಕೆ ಒತ್ತಡ ಹಾಕುವುದು
(4) ಬಣಕಲ್ ನಲ್ಲಿ ಹಲವು ದಿನಗಳಿಂದ ಬಿಡಾಡಿ ದನಗಳ ಹಾವಳಿ ಮಿತಿಮೀರಿದ್ದು ಹಲವು ಅಪಘಾತಗಳಿಗೆ ಕಾರಣವಾಗಿದೆ. ಅದರಿಂದ ಬಿಡಾಡಿ ದನಗಳನ್ನು ಗೋಶಾಲೆಗೆ ಕಳುಹಿಸಲು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು .ಹೀಗೆ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಇರ್ಫಾನ್.ನೋಡಲ್ ಅಧಿಕಾರಿ ಹರ್ಷಕುಮಾರ್.ಬಣಕಲ್ ಗ್ರಾಮಪಂಚಾಯಿತಿ ಸದಸ್ಯರು. ಪಿ ಡಿ ಓ ಕೃಷ್ಣಪ್ಪ ಉಪಸ್ಥಿತರಿದ್ದರು
