ಬಣಕಲ್ ಕ್ರೈಸ್ತರ ಅಭಿವೃದ್ಧಿ ಸಂಘದಿಂದ ನೂತನ ಸಬ್ ಇನ್ಸ್ಪೆಕ್ಟರ್ ಅವರಿಗೆ ಶುಭಕೋರಲಾಯಿತು

ಬಣಕಲ್ :ಬಣಕಲ್ ಪೊಲೀಸ್ ಠಾಣೆಯ ನೂತನ ಮಹಿಳಾ ಸಬ್ ಇನ್ಸ್ಪೆಕ್ಟರ್ ಆಗಿ ಗಾಯತ್ರಿ ನೇಮಕಗೊಂಡಿದ್ದಾರೆ. ಬಣಕಲ್ ನಲ್ಲಿ 2 ವರ್ಷಗಳ ಕಾಲ ಸಬ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿ ಶ್ರೀನಾಥ್ ರೆಡ್ಡಿ ಕೊಪ್ಪ ಠಾಣೆಗೆ ವರ್ಗಾವಣೆ ಯಾದಾ ಹಿನ್ನಲೆಯಲ್ಲಿ ಇವರ ಸ್ಥಾನದಿಂದ ತೆರವಾಗಿತ್ತು.

ಗಾಯತ್ರಿ ಯವರು ಲಿಂಗದಹಳ್ಳಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ, ಗೋಣಿಬಿಡು ಠಾಣೆಯಲ್ಲಿ ಕರ್ತವ್ಯದಲ್ಲಿದ್ದು, ಈಗ ಬಣಕಲ್ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿ ಬುಧವಾರದಂದು ಕರ್ತವ್ಯಕ್ಕೆ ಹಾಜರಾಗಿದ್ದ ಹಿನ್ನಲೆಯಲ್ಲಿ ಇಂದು ಬಣಕಲ್ ಕ್ರೈಸ್ತರ ಅಭಿವೃದ್ಧಿ ಸಂಘದಿಂದ ಇವರ ವತಿಯಿಂದ ಠಾಣೆಗೆ ಭೇಟಿ ನೀಡಿ ಶುಭಾ ಕೊರಲಾಯಿತು.