ಬಣಕಲ್ :ಹಣ ಎಂದರೆ ಹೆಣವೂ ಬಾಯಿ ಬಿಡುವುದು ‘ ಎಂಬ ಗಾದೆ ಮಾತಿದೆ. ಮತ್ತೊಬ್ಬರ ಕಿಸೆಗೆ ಕೈಹಾಕುವ ಬಗ್ಗೆ ಸದಾ ಹೊಂಚು ಹಾಕುವ ಇಂದಿನ ದಿನಗಳಲ್ಲಿ ಸುಭಾಷ್ ನಗರದ ಯೋಗಾನಂದ ಶೆಟ್ಟಿ ಎಂಬುವವರು ಪ್ರಾಮಾಣಿಕತೆ ಇನ್ನೂ ಜೀವಂತವಾಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.ಎರಡು ದಿನದ ಹಿಂದೆ ಪ್ರವೀಣ್ ಆಚಾರ್ಯ ಎಂಬುವವರ ಮಗನ ಚಿನ್ನದ ಸರವನ್ನು ಕಳೆದುಕೊಂಡಿದ್ದರು ಎಷ್ಟೇ ಹುಡುಕಿದರೂ ಸಿಗದ ಕಾರಣ ಮನೆಯವರು ಕೈಚೆಲ್ಲಿ ಕುಳಿತಿದ್ದರು.ಆದರೆ ಮಾನವೀಯತೆಗೆ ಸಾಕ್ಷಿ ಎಂಬಂತೆ ಸುಭಾಷ್ ನಗರದ ಯೋಗಾನಂದ ಶೆಟ್ಟಿ ಎಂಬುವವರು ತನಗೆ ಸಿಕ್ಕಿದ ಚಿನ್ನನ ಸರವನ್ನು ವಾರಸುದಾರನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ