:ಬಣಕಲ್ :ಇಂಟರ್ನೆಟ್ ಸಮಸ್ಯೆಯಿಂದ ಕೂಲಿ ಉದ್ಯೋಗ ಬಿಟ್ಟು ಪಡಿತರ ಅಂಗಡಿಗಳಲ್ಲಿ, ಜನ ಬೆಳಗ್ಗೆಯಿಂದ ಸಂಜೆ ವರೆಗೆ ಕಾದು ಬರಿ ಕೈಯಲ್ಲಿ ವಾಪಸದ ಘಟನೆ ಇಂದು ಬಣಕಲ್ ಪಡಿತರ ಅಂಗಡಿಯಲ್ಲಿ ನಡೆದಿದೆ . ಇಂದು ತಿಂಗಳ ಕೊನೆಯ ದಿನವಾದ್ದರಿಂದ ಪಡಿತರ ಕೊಳ್ಳಲು ಹಳ್ಳಿಯಿಂದ ಜನರು ಪಡಿತರ ಕೊಳ್ಳಲು ಬಂದಿದ್ದರು ಆದರೆ ಎಲ್ಲೆಡೆ ಸರ್ವರ್ ನಿಧಾನಗತಿಯಲ್ಲಿ ಇರುವ ಕಾರಣ ಮಾಹಿತಿಗಳನ್ನು ಅಪ್‌ಡೇಟ್ ಮಾಡಲು ಸಾಧ್ಯವಾಗಿರುವುದಿಲ್ಲ
ಸೋಮವಾರ ಇಂಟರ್‌ನೆಟ್ ಸಂಪರ್ಕ ಕೈಕೊಟ್ಟ ಹಿನ್ನೆಲೆಯಲ್ಲಿ ಸರ್ವರ್ ಸಮಸ್ಯೆ ಕಾಣಿಸಿಕೊಂಡ ಹಿನ್ನಲೆ ಸಿಬ್ಬಂದಿ ಮತ್ತು ಗ್ರಾಹಕರನ್ನು ಹೈರಾಣಾಗಿಸಿದೆ .
ಈ ಹಿನ್ನಲೆಯಲ್ಲಿ ಇಂಟರ್ನೆಟ್ ಸಂಪರ್ಕ ಸಿಗದೇ ಫಜೀತಿ ಸೃಷ್ಟಿಯಾಗಿದೆ.
ಇಂಟರ್ನೆಟ್ ಸರಿಯಾಗಿ ಸಿಗದ ಕಾರಣ ನ್ಯಾಯಬೆಲೆ ಅಂಗಡಿಯಲ್ಲಿ ಬೆಳಗ್ಗಿನಿಂದ ಕಾದು ಜನ ಮರಳಿ ಮನೆಗೆ ಹೋದ ಸೋಮವಾರ ನಡೆಯಿತು. ಮಾಜಿ ತಾ ಪಂ ಸದಸ್ಯ ಸಬ್ಳಿ ದೇವರಾಜ್ ಮಾತನಾಡಿ ಇಂಟರ್ನೆಟ್ ಸಮಸ್ಯೆಯಿಂದ ಜನ ಪಡಿತರ ಅಂಗಡಿಯಲ್ಲಿ ಕಾದು ಹೈರಾಣಗಿದ್ದಾರೆ ಅಧಿಕಾರಿಗಳಿಗೆ ಫೋನ್ ಮಾಡಿದರೆ ನಿರ್ಲಕ್ಷದ ಉತ್ತರ ಕೊಡುತ್ತಾರೆ ಎಂದರು.