ಚಿಕ್ಕಮಗಳೂರು:ಮೂಡಿಗೆರೆ ತಾಲ್ಲೂಕಿನ ಬಣಕಲ್ ನ ಸುಭಾಷ್ ನಗರದಲ್ಲಿ ವಾಸಿಸುತ್ತಿದ್ದ ಮಹಿಳೆ ಸಾವಿತ್ರಿ (25) ವರ್ಷ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿನ ಬಗ್ಗೆ ಅನುಮಾನ ವ್ಯಕ್ತ ಪಡಿಸಿ ತಾಯಿ ದೂರುಕೊಟ್ಟಿದ್ದಾರೆ. ಆರು ವರ್ಷದ ಹಿಂದೆ ಅಶ್ವಥ್ ಜೊತೆ ಪ್ರೇಮ ವಿವಾಹ ನಡೆದಿತ್ತು.ಈ ಹಿಂದೆ ಇಬ್ಬರ ನಡುವೆ ದಾಂಪತ್ಯ ಕಲಹ ನಡೆದಿತ್ತು ಪೊಲೀಸ್ ಠಾಣೆಯಲ್ಲಿ ಇಬ್ಬರಿಗೂ ಕರೆಸಿ ರಾಜಿ ಸಂಧಾನ ಕೂಡ ಮಾಡಲಾಗಿತ್ತು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ