ಬಣಕಲ್ ಸುತ್ತ ಮುತ್ತ ಸರಳ ಶ್ರೀ ಕೃಷ್ಣ ಜಯಂತಿ ತುಂಟ ಕೃಷ್ಣನ ವೇಷ ತೊಟ್ಟು ಸಂಭ್ರಮಿಸಿದ ಚಿಣ್ಣರು

ಬಣಕಲ್ :ಇಂದು ಇಡೀ ಭಾರತ ಬಾಲಕೃಷ್ಣನ ಆಡುಂಬೋಲವಾಗಿದೆ. ವರ್ಷಾ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷದ ಅಷ್ಟಮಿಯಂದು ಮುದ್ದುಮುದ್ದು ಬಾಲಕೃಷ್ಣರ ರೂಪದಲ್ಲಿ ಶ್ರೀಕೃಷ್ಣನೇ ಅವತರಿಸಿದ್ದಾನೆ, ಎಲ್ಲೆಲ್ಲೂ ಸಂತಸದ ಹೊಳೆ ಹರಿಸಿದ್ದಾನೆ, ಜಾತಿಮತವನ್ನು ಮೀರಿ ನಿಂತಿದ್ದಾನೆ.ಇಂದು ಬಣಕಲ್ ಸುತ್ತ ಮುತ್ತ ಸಂಭ್ರಮದಿಂದ ಕೃಷ್ಣಷ್ಟಮಿ ಆಚರಿಸಲಾಯಿತು
ಇನ್ನೂ ಹೆಜ್ಜೆ ಇಡಲೂ ಬಾರದ ಪುಟಾಣಿ ಮಕ್ಕಳಿಗೆ ರೇಷ್ಮೆ ಶಲ್ಯ ಉಡಿಸಿ, ಕಾಲಿಗೆ ಗೆಜ್ಜೆ ತೊಡೆಸಿ, ಕೊರಳಿಗೆ ಮುತ್ತಿನ ಹಾರ ಹಾಕಿ, ಬಾಯಿಗೊಂದಿಷ್ಟು ಬೆಣ್ಣೆ ಸವರಿ, ತಲೆಗೆ ಕಟ್ಟಿದ ಕಿರೀಟಕ್ಕೊಂದು ನವಿಲುಗರಿಯನ್ನು ಸಿಕ್ಕಿಸುವುದೆಂದರೆ ಅಮ್ಮಅಪ್ಪಂದಿರಿಗೆ ಅದೇನೋ ಖುಷಿ. ಇದು ಪದಗಳಲ್ಲಿ ವರ್ಣಿಸಲು ಬಾರದಂಥದ್ದು.
ಕೃಷ್ಣನ ವೇಷ ತೊಟ್ಟು, ಫೋಟೋಗೆ ಪೋಸ್ ಕೊಟ್ಟರು ಮುದ್ದುಮರಿಗಳು

Sahifa Theme License is not validated, Go to the theme options page to validate the license, You need a single license for each domain name.