ಬಣಕಲ್ :ಬಣಕಲ್ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಹೈರಾಣಾಗಿದ್ದ ಜನರಿಗೆ ಇಲಾಖೆ ತೆಗದುಕೊಂಡ ಕಟ್ಟುನಿಟ್ಟಿನ ಕ್ರಮದಿಂದ ತಾತ್ಕಾಲಿಕ ಮುಕ್ತಿ ಸಿಕ್ಕಂತಾಗಿದೆ.
ಹೌದು, ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿರುವ ಪಟ್ಟಣಕ್ಕೆ ಪ್ರತಿನಿತ್ಯ ಸಾವಿರಾರು ವಾಹನಗಳು ಬರುತ್ತಿದ್ದು, ಟ್ರಾಫಿಕ್ ಸಮಸ್ಯೆಯಿಂದ ಜನ ಹೈರಾಣಾಗಿದ್ದರು. ಬಣಕಲ್ ಪೊಲೀಸ್ ಠಾಣೆಯ ಠಾಣಾಧಿಕಾರಿ ದಿಲೀಪ್ ಕುಮಾರ್ ಅಧಿಕಾರ ಸ್ವೀಕರಿಸಿದ ತಕ್ಷಣ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರ ಭಾಗವಾಗಿ ಟ್ರಾಫಿಕ್ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರೆತ್ತಿದ್ದು, ಅಧಿಕಾರಿಗಳ ನಡೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ವಾಹನ ಚಾಲಕರ ಸಭೆ ನಡೆಸಿದರು ವಾಹನ ಚಾಲಕರು ತಮ್ಮ ದಾಖಲೆ ಪತ್ರಗಳಾದ ಚಾಲನಾ ಪರವಾನಗಿ, ವಾಹನ ವಿಮೆ ದಾಖಲಾತಿ, ಮಾಲಿನ್ಯ ತಪಾಸಣೆ ದಾಖಲಾತಿ, ಟ್ಯಾಕ್ಸಿ ಚಾಲಕರು ಸಮವಸ್ತ್ರ ಧರಿಸುವುದು, ದ್ವಿಚಕ್ರ ವಾಹನ ಚಾಲಕರು ಹೆಲ್ಮೆಟ್ ಕಡ್ಡಾಯವಾಗಿ ಧರಿಸುವುದು ಹಾಗೂ ಸಂಚಾರ ನಿಯಮದ ಬಗ್ಗೆ ಅರಿವು ಮೂಡಿಸಿದರು. ದಾಖಲೆ ಪತ್ರ ಸರಿಪಡಿಸಿಕೊಳ್ಳಲು ಹದಿನೈದು ದಿನಗಳ ಗಡುವು ನೀಡಿದ್ದು, ತಪ್ಪಿದಲ್ಲಿ ಬಾರಿ ಮೊತ್ತದ ದಂಡ ವಿಧಿಸುವ ಎಚ್ಚರಿಕೆ ನೀಡಿದ್ದರು.
ಪಟ್ಟಣದಲ್ಲಿ ವಾಹನ ನಿಲುಗಡೆಗೆ ಪಾರ್ಕಿಂಗ್ ಸ್ಥಳದ ಕೊರತೆ ಇದ್ದು, ಇರುವ ಸ್ಥಳದಲ್ಲಿ ಚಾಲಕರು ಗಾಡಿಗಳನ್ನು ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ಸಮಸ್ಯೆ ಸೃಷ್ಟಿಯಾಗಿತ್ತು. ಸಿಬ್ಬಂದಿ ಕೊರತೆಯ ನಡುವೆಯೂ ಇರುವ ಸಿಬ್ಬಂದಿಗಳ ನೇತೃತ್ವದಲ್ಲಿ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದು, ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.
ಖಾಸಗಿ ವಾಹನಗಳು ತಮಗೆ ನಿಗದಿಪಡಿಸಿದ ಸ್ಥಳದಲ್ಲಿ ಸರತಿ ಸಾಲಿನಲ್ಲಿ ವಾಹನ ನಿಲ್ಲಿಸುತ್ತಿದ್ದಾರೆ
ಇದೇ ರೀತಿ ಅಧಿಕಾರಿಗಳು ಕರ್ತವ್ಯ ನಿಭಾಯಿಸಿದಲ್ಲಿ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ದೊರಕುವ ವಿಶ್ವಾಸವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದರು.
*“ವರ್ತಕರು ಪಾದಾಚಾರಿ ರಸ್ತೆಗಳ ಮೇಲೆ ತಮ್ಮ ವ್ಯಾಪಾರ ಸಾಮಗ್ರಿಗಳ ಜೋಡಣೆ ಮಾಡುತ್ತಿದ್ದಾರೆ,ಎಚ್ಚರಿಕೆ ನೀಡಿದರೂ ಕೂಡ ಸಮಸ್ಯೆಬಗ್ಗೆ ವರ್ತಕರು ಗಮನ ಹರಿಸಿಲ್ಲ ಎಂಬ ದೂರುಗಳು ಬರುತ್ತಿವೆ ಇದರ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಹಾಗೇ ವಾಹನಗಳಿಂದ ಪದೇ ಪದೇ ತಪ್ಪುಗಳು ಮರುಕಳಿಸುತ್ತಿದ್ದಲ್ಲಿ ಅಂತಹ ವಾಹನವನ್ನು ನಿಯಮಾನುಸಾರ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. *ದಿಲೀಪ್ ಕುಮಾರ್ ಸಬ್ಇನ್ಸ್ಪೆಕ್ಟರ್, ಬಣಕಲ್ ಪೊಲೀಸ್ ಠಾಣೆ*
“ಟ್ರಾಫಿಕ್ ನಿಯಂತ್ರಣಕ್ಕೆ ಠಾಣಾಧಿಕಾರಿ ಕೈಗೊಂಡ ನಿರ್ಧಾರ ಸ್ವಾಗತಾರ್ಹ.ದಿನದಿಂದ ದಿನಕ್ಕೆ ವಾಹನ ಸಂಖ್ಯೆಯು ಹೆಚ್ಚುತ್ತಿರುವುದರಿಂದ ನಿಲುಗಡೆಗೆ ಸಮಸ್ಯೆ ಉಂಟಾಗಿದ್ದು, ಇಲಾಖೆ ಕ್ರಮಗಳಿಗೆ ಚಾಲಕರು ಸಹಕರಿಸಲಿದ್ದೇವೆ.”
ಚಾಲಕ ಶರತ್ ಮತ್ತಿಕಟ್ಟೆ
ವರದಿ ✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ