ರಿವರ್ ವ್ಯೂ ಆಂಗ್ಲ ಮಾಧ್ಯಮ ಶಾಲೆ, ಬಣಕಲ್‌ನ ವಾಲಿಬಾಲ್ ಪ್ರತಿಭೆಗಳಾದ ನಾದಿಯಾ ಫಾತಿಮಾ ಹಾಗೂ ಶ್ರಿಯಾ ಕೆ. ಎಸ್. ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ

ಬಣಕಲ್: ಜಿಲ್ಲಾ ಮಟ್ಟದ 14 ವರ್ಷ ವಯೋಮಾನದ ವಾಲಿಬಾಲ್ ಕ್ರೀಡಾಕೂಟದಲ್ಲಿ ರಿವರ್ ವ್ಯೂ ಆಂಗ್ಲ ಮಾಧ್ಯಮ ಶಾಲೆ, ಬಣಕಲ್‌ನ ವಿದ್ಯಾರ್ಥಿನಿಯರಾದ ನಾದಿಯಾ ಫಾತಿಮಾ (7ನೇ ತರಗತಿ) ಹಾಗೂ ಶ್ರಿಯಾ ಕೆ. ಎಸ್. (6ನೇ ತರಗತಿ) ಅವರು ಅತ್ಯುತ್ತಮ ಪ್ರದರ್ಶನ ನೀಡಿ ಮೈಸೂರು ವಿಭಾಗ ಮಟ್ಟದ ವಾಲಿಬಾಲ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿನಿಯರ ಈ ಸಾಧನೆ ಶಾಲೆಗೆ ಹೆಮ್ಮೆಯ ಸಂಗತಿಯಾಗಿದ್ದು, ಅವರ ಪರಿಶ್ರಮ, ಕ್ರೀಡಾ ಪ್ರತಿಭೆ ಹಾಗೂ ತರಬೇತುದಾರರು ಮತ್ತು ಶಿಕ್ಷಕರ ಮಾರ್ಗದರ್ಶನಕ್ಕೆ ಸಂದ ಗೌರವವಾಗಿದೆ.

ಈ ಸಾಧನೆ ಮಾಡಿದ ವಿದ್ಯಾರ್ಥಿನಿಯರಿಗೆ ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕವೃಂದ, ಶಿಕ್ಷಕೇತರ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.

ಮೈಸೂರು ವಿಭಾಗ ಮಟ್ಟದಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಶಾಲೆ ಹಾಗೂ ಬಣಕಲ್‌ಗೆ ಕೀರ್ತಿ ತರಲಿ ಎಂದು ಗ್ರಾಮಸ್ಥರ ಹಾರೈಕೆ.