ಮತ್ತಿಕಟ್ಟೆ ಗ್ರಾಮದ ಶಾಲೆಯ ಬಳಿ ಕಾಡು ಕೋಣ ಪ್ರತ್ಯಕ್ಷ ಗ್ರಾಮಸ್ಥರಲ್ಲಿ ಆತಂಕ


ಮೂಡಿಗೆರೆ ತಾಲ್ಲೂಕು ಬಣಕಲ್ ಹೋಬಳಿಯ ಮತ್ತಿಕಟ್ಟೆ ಗ್ರಾಮದಲ್ಲಿ ಶನಿವಾರ ಸಂಜೆ ಒಂಟಿ ಕಾಡು ಕೋಣ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ಸಂಜೆ ಸಮಯದಲ್ಲಿ ಆಹಾರ ಹುಡುಕಿಕೊಂಡು ಶಾಲಾ ಸಮೀಪ ಸುಳಿದಾಡಿದೆ.

ಪ್ರತಿದಿನ ಅದೇ ಸಮಯದಲ್ಲಿ ಮಕ್ಕಳ ಓಡಾಟ ಹಾಗೂ ಕೂಲಿಕಾರ್ಮಿಕರು ಕೆಲಸ ಮುಗಿಸಿ ಮುಗಿಸಿ ಮನೆಗೆ ನಡೆದುಕೊಂಡು ಸಾಗುತ್ತಾರೆ ನಿನ್ನೆ ಶಾಲಾ ಮಕ್ಕಳು ಮದ್ಯಾಹ್ನದ ನಂತರ ರಜಾ ಇದ್ದುದರಿಂದ ಮನೆ ಸೇರಿಕೊಂಡಿದ್ದಾರೆ. ಇಲ್ಲವಾದಲ್ಲಿ ಅಪಾಯ ಎದುರಾಗುತ್ತಿತ್ತು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಗ್ರಾಮಸ್ಥ ಕಿಶೋರ್ ಮಾತನಾಡಿ ಕಾಡು ಕೋಣಗಳು ಜನವಸತಿ ಪ್ರದೇಶಗಳಿಗೆ ಬರುವುದರಿಂದ ಜನರಲ್ಲಿ ಆತಂಕ ಉಂಟಾಗುತ್ತದೆ. ಹಗಲು ಅಥವಾ ರಾತ್ರಿ ವೇಳೆಯಲ್ಲಿ ಕಾಡುಕೋಣಗಳು ದಿಡೀರ್ ಪ್ರತ್ಯಕ್ಷಗೊಳ್ಳುವುದರಿಂದ ಓಡಾಡುವ ಸಾರ್ವಜನಿಕರಿಗೆ ಅಪಾಯದ ಭಯವಿರುತ್ತದೆ. ಅರಣ್ಯ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು.
ವರದಿ ✍️ಸೂರಿ ಬಣಕಲ್