ಬಣಕಲ್ :ಜೆ. ಎಸ್. ಶಾಲೆ ಮೂಡಿಗೆರೆಯಲ್ಲಿ ದಿನಾಂಕ 01/08/2026 ರಂದು ದೇಶಭಕ್ತಿ ಭಾವನೆಯನ್ನು ಬೆಳೆಸುವ ಉದ್ದೇಶದಿಂದ ದೇಶಭಕ್ತಿ ಛದ್ಮವೇಶ ಸ್ಪರ್ಧೆಯನ್ನು ಅದ್ದೂರಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಹಾಗೂ ತೀರ್ಪುಗಾರರಾಗಿ ಶ್ರೀಮತಿ ಮಧುಚಂದ್ರ ರವರು ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಮತ್ತೋರ್ವ ತೀರ್ಪುಗಾರರಾಗಿ ಶ್ರೀಮತಿ ಆಶಲತಾರವರು ಹಾಜರಿದ್ದರು.
ಜೆ. ಎಸ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ನಿರ್ದೇಶಕರಾದ ಮೊಹಮ್ಮದ್ ಇಮ್ರಾನ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಧೈರ್ಯ ಹಾಗೂ ರಾಷ್ಟ್ರ ನಾಯಕರ ಆದರ್ಶಗಳನ್ನು ಬೆಳೆಸಲು ಇಂತಹ ಕಾರ್ಯಕ್ರಮಗಳು ಅತ್ಯಂತ ಅಗತ್ಯವೆಂದು ತಿಳಿಸಿದರು.
ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಧರಿಸಿ ವಿದ್ಯಾರ್ಥಿಗಳು ನೆರೆದಿದ್ದವರ ಗಮನ ಸೆಳೆದರು. ಅಲ್ಲದೇ ಮಕ್ಕಳ ಅಭಿನಯ ಹಾಗೂ ದೇಶಭಕ್ತಿ ಸಂದೇಶಗಳು ಪೋಷಕರ ಹಾಗೂ ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾದವು. ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರು, ಶಿಕ್ಷಕರು ಪೋಷಕರು ಹಾಗೂ ವಿದ್ಯಾರ್ಥಿಗಳು ಬಾಗವಹಿಸಿ ಸ್ಪರ್ಧೆಯನ್ನು ಯಶಸ್ವಿಗೊಳಿಸಿದರು.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ