ಪೊಲೀಸ್ ಠಾಣೆಯ ಆವರಣವನ್ನು ಸ್ವಚ್ಛಗೊಳಿಸಿ, ಕಾಂಪೌಂಡ್ ಗೋಡೆಗೆ ಸುಣ್ಣಬಳಿಸಿ ಬಣಕಲ್ ನೂತನ ಪಿ ಎಸ್ ಐ ದಿಲೀಪ್ ಕುಮಾರ್ ಗಮನ ಸೆಳೆಯುವಂತೆ ಮಾಡಿದ್ದಾರೆ.
ಇದು ಠಾಣೆಯ ಆವರಣವನ್ನು ಸುಂದರಗೊಳಿಸುವ ಮತ್ತು ಸ್ವಚ್ಛಗೊಳಿಸುವ ಉದ್ದೇಶ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಸಬ್ ಇನ್ಸ್‌ಪೆಕ್ಟರ್ ದಿಲೀಪ್ ಕುಮಾರ್ ಬಣಕಲ್ ಠಾಣೆಗೆ ಬಂದ ಮೇಲೆ ಸ್ಥಳಿಯ ದಾನಿಗಳ ಸಹಕಾರದಿಂದ ಠಾಣೆಗೆ ಹೊಸ ರೂಪ ನೀಡಿದ್ದಾರೆ.
ಠಾಣೆಯ ಮುಂಭಾಗ ನೂತನ ಬೋರ್ಡ್ಗಳು ಹಾಗೇ ಪಾಚಿ ಗಟ್ಟಿದ್ದ ಕಂಪೌಂಡ್ ಗೆ ಬಣ್ಣ ಬಳಿಸುವ ಮೂಲಕ ಹೊಸ ಮೆರಗು ತಂದಿದೆ. ಠಾಣಾ ಮುಂಭಾಗದಲ್ಲಿ ನೀರಿನಿಂದ ಪೊಲೀಸರೆ ಸ್ವಚ್ಚ ಗೊಳಿಸುವ ದೃಶ್ಯ ಕಂಡು ಬಂದಿತು.
ಠಾಣಾ ಆವರಣವು ಸ್ವಚ್ಛವಾಗಿರಬೇಕು ಮತ್ತು ಸಾರ್ವಜನಿಕರಿಗೆ ಉತ್ತಮ ವಾತಾವರಣ ಕಲ್ಪಿಸಿಕೊಡಬೇಕು ಎಂಬುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಪಿ ಎಸ್ ಐ ದಿಲೀಪ್ ಕುಮಾರ್ ತಿಳಿಸಿದ್ದಾರೆ.
ವರದಿ ✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ