ಬಿಬಿಎ ಪದವಿಯಲ್ಲಿ 10ನೇ ರ‍್ಯಾಂಕ್ ಪ್ರೇರಣಾಳ ಸಾಧನೆಗೆ ಮೆಚ್ಚುಗೆ

ಬಣಕಲ್ :ಕುಮಾರಿ ಪ್ರೇರಣಾ ಪಿ ಅವರು, ಚಿಕ್ಕಮಗಳೂರಿನ ಎಂಇಎಸ್ ಎಂಎಸ್‌ಪಿಎಸ್ ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ಬಿಬಿಎ ಪದವಿ ಅಭ್ಯಾಸ ಮಾಡಿ, ಕುವೆಂಪು ವಿಶ್ವವಿದ್ಯಾಲಯದಲ್ಲಿ 10ನೇ ರ್ಯಾಂಕ್ ಪಡೆದು ತಮ್ಮ ಕುಟುಂಬ ಹಾಗೂ ಊರಿಗೆ ಅಪಾರ ಹೆಮ್ಮೆ ತಂದಿದ್ದಾರೆ.
ಇವರು ಮಾಳಿಗನಾಡು ಗ್ರಾಮದ ಎಂ.ಕೆ.ರಮೇಶ್ ಮತ್ತು ಗೌರಮ್ಮ ಇವರ ಮೊಮ್ಮಗಳು, ಬಣಕಲ್ ನ ಶೋಭಾ.ಎಂ.ಆರ್ ಇವರ ಪುತ್ರಿ.

ಅವರ ಈ ವಿಶಿಷ್ಟ ಶೈಕ್ಷಣಿಕ ಸಾಧನೆ, ಪರಿಶ್ರಮ, ಸಮರ್ಪಣೆ ಮತ್ತು ಶ್ರೇಷ್ಠತೆಯ ಪ್ರತಿಬಿಂಬವಾಗಿದೆ. ಪ್ರಸ್ತುತ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದು, ಇನ್ನಷ್ಟು ಉನ್ನತ ಸಾಧನೆಗಳತ್ತ ತಮ್ಮ ಪಯಣವನ್ನು ಮುಂದುವರಿಸಿದ್ದಾರೆ.

ಪ್ರೇರಣಾ ಅವರ ಸಾಧನೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು, ಬಣಕಲ್ ಮತ್ತು ಚಿಕ್ಕಮಗಳೂರಿಗೆ ಹೆಮ್ಮೆಯ ಕ್ಷಣವಾಗಿದೆ. ಅವರ ಯಶಸ್ಸು ಕಠಿಣ ಪರಿಶ್ರಮ, ದೃಢಸಂಕಲ್ಪ ಮತ್ತು ಶಿಕ್ಷಣದ ಶಕ್ತಿಗೆ ಉಜ್ವಲ ಉದಾಹರಣೆಯಾಗಿದೆ.