ಬಣಕಲ್ ಗುಡ್ಡ ಹಟ್ಟಿಯಲ್ಲಿ ಶ್ರೀ ಸತ್ಯ ಸಾರಮನಿ ದೈವ ಸ್ಥಾನ ಸೇವಾ ಸಮಿತಿ ವತಿಯಿಂದ ನಡೆದ ಅದ್ದೂರಿ ನೆಮೋತ್ಸವ

ಮೂಡಿಗೆರೆ ತಾಲ್ಲೂಕ್ಕಿನ ಶ್ರೀ ಸತ್ಯ ಸಾರಮನಿ ದೈವಸ್ಥಾನ ಸೇವಾ ಸಮಿತಿ ವತಿಯಿಂದ ಬಣಕಲ್ ಗುಡ್ಡಹಟ್ಟಿಯಲ್ಲಿ ಧರ್ಮ ದೈವ ಅಲೇರಾ ಪಂಜುರ್ಲಿ ಹಾಗೂ ಪರಿವಾರ ದೈವಗಳ 3ನೇ ವರ್ಷದ ನೇಮೋತ್ಸವ ದಿನಾಂಕ 05-05-2026ನೇ ಮಂಗಳವಾರದಿಂದ ಬುಧವಾರದವರೆಗೆ ಅದ್ದೂರಿಯಾಗಿ ನಡೆಯಿತು.

ಮಲೆನಾಡಿನಲ್ಲಿ 3ನೇ ವರ್ಷದ ಗುಳಿಗ ದೈವದ ಕೋಲಾ(ನೆಮೋತ್ಸವ)ಅತ್ಯಂತ ವಿಜೃಂಭಣೆಯಿಂದ ಭಕ್ತಿ-ಭಾವಪೂರ್ಣವಾಗಿ ನೆರವೇರಿದೆ.ಸ್ಥಳೀಯರಷ್ಟೇ ಅಲ್ಲದೆ ಸುತ್ತಮುತ್ತಲಿನ ಊರುಗಳಿಂದ ಸಾವಿರಕ್ಕೂ ಹೆಚ್ಚು ಭಕ್ತರು ತಂಡೋಪತಂಡವಾಗಿ ಬಂದು ಪ್ರಸಾದ ಸ್ವೀಕರಿಸಿದರು. ಭಕ್ತರಿಗಾಗಿ ದೇವಸ್ಥಾನದ ಸಮಿತಿಯಿಂದ ಅದ್ಧೂರಿ ಅನ್ನಸಂತರ್ಪಣೆ ವ್ಯವಸ್ಥೆಯನ್ನೂ ಮಾಡಲಾಗಿತ್ತು.ಈ ಸಂದರ್ಭದಲ್ಲಿ 10ನೇ ತರಗತಿ ಹಾಗೂ ದ್ವಿತೀಯ ಪಿ ಯು ಸಿ ಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಇದೆ ಸಂದರ್ಭದಲ್ಲಿ ಪ್ರಜ್ಞಾ ಎಂಬ ಮಗು ಭರತ ನಾಟ್ಯ ನೃತ್ಯದ ಮೂಲಕ ಭಕ್ತರನ್ನು ರಂಜಿಸಿದರು.