ಜಮೀನು ವಿವಾದ ತೋಟಕ್ಕೆ ಅಕ್ರಮ ಪ್ರವೇಶ ಕಾಫಿ ಗಿಡ ನಾಶ ಬಣಕಲ್ ಠಾಣೆಯಲ್ಲಿ ದೂರು ದಾಖಲು

ಬಣಕಲ್: ಜಮೀನಿನ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆ ತೋಟದಲ್ಲಿ ಬೆಳೆದಿದ್ದ ಕಾಫಿ ಗಿಡಗಳನ್ನು ಕಡಿದು ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಬಣಕಲ್ ಹೊರಟ್ಟಿ ಗ್ರಾಮದ ಆಕಾಶ್ ಎಂಬುವವರು ಬಣಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬಣಕಲ್ ಹೊರಟ್ಟಿ ಗ್ರಾಮದ ಅಶೋಕ್ ಎಂಮತ್ತು ಕೆ.ವಿ. ಶ್ರೀಮತಿ ಹಾಗೂ ಕಮಲಾಕ್ಷಿರವರ ಜಂಟಿ ಖಾತೆಯಲ್ಲಿರುವ ಕಾಫಿ ತೋಟಕ್ಕೆ ಪಕ್ಕದ ಜಮೀನಿನ ರಾಜೇಶ್ ಹಾಗೂ ಅವರ ಪತ್ನಿ ರೇಷ್ಮ ಕೂಲಿ ಕಾರ್ಮಿಕರನ್ನು ಬಿಟ್ಟು ಹತ್ತಾರು ವರ್ಷಗಳಿಂದ ಬೆಳೆದಿದ್ದ ಕಾಫಿ ಗಿಡಗಳನ್ನು ಕಡಿದು ನಾಶ ಮಾಡಿದ್ದು ಅತಿಕ್ರಮ ಪ್ರವೇಶ ಮಾಡಿ ನಷ್ಟ ಉಂಟು ಮಾಡಿದ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ದೂರು ನೀಡಿದ್ದಾರೆ. ಬಣಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.