ಬಣಕಲ್ :ಕಾಲುಜಾರಿ ಬಿದ್ದು ಮಹಿಳೆಯೋರ್ವರು ಸಾವನ್ನಪ್ಪಿರುವ ಘಟನೆ ಮೂಡಿಗೆರೆ ತಾಲ್ಲೂಕ್ಕಿನ ಕಡಿದಾಳು ಗ್ರಾಮದಲ್ಲಿ ನಡೆದಿದೆ.
ಸುಬ್ಬಮ್ಮ (70)ಸಾವನ್ನಪ್ಪಿರುವ ಮಹಿಳೆ ಮದ್ಯಾಹ್ನದ ಸಮಯದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕಾಲುಜಾರಿ ಹೇಮಾವತಿ ನದಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.
ಘಟನೆ ತಿಳಿದುಸ್ಥಳಕ್ಕೆ ಭೇಟಿನೀಡಿದ ಸಮಾಜ ಸೇವಕ ಆರಿಫ್ ಹಾಗೂ ರಮ್ಲ ಮಹಿಳೆಯ ಮೃತ ದೇಹವನ್ನು ನದಿಯಿಂದ ಮೇಲೆತ್ತಿದ್ದಾರೆ. ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ