ಬಣಕಲ್ :ಕೇಂದ್ರ ಸರ್ಕಾರದ. ಜೆ. ಜೆ. ಎಂ. ಯೋಜನೆ ಅಡಿಯಲ್ಲಿ ಬಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯುತ್ತಿದ್ದು. ಶ್ರೀ ವಿದ್ಯಾಭಾರತಿ ವಿದ್ಯಾ ಸಂಸ್ಥೆ. ಬಿ. ಸಿ.ಎಂ. ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯ. ಪೋಲಿಸ್ ವಸತಿ ಗೃಹ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಉರ್ದು ಹಿರಿಯ ಪ್ರಾಥಮಿಕ ಶಾಲೆ. ರಿವರ್ ವ್ಯೂ ಶಾಲೆ ಅಕ್ಕ ಪಕ್ಕದ ಎರಡು ಬದಿಗಳಲ್ಲಿ ಪೈಪ್ ಲೈನ್ ಮಾಡಲು ಚರಂಡಿ ತೆಗೆದು ರಸ್ತೆ ಸಂಪೂರ್ಣ ದೂಳಿನಿಂದ ಕೊಡಿದ್ದು ಪ್ರತಿ ದಿನ ಸಾವಿರಾರು ಮಕ್ಕಳು ಸಾರ್ವಜನಿಕರು ಓಡಾಟಕ್ಕೆ ತುಂಬಾ ಕಷ್ಟವಾಗಿದ್ದು ಆನೇಕ ಮಕ್ಕಳಿಗೆ ಅಸ್ತಮಾ. ಡೆಸ್ಟ್ ಅಲರ್ಜಿ ಗಳಂತಹ ಖಾಯಿಲೆಗೆ ಮಕ್ಕಳು ಸಾರ್ವಜನಿಕರು ಬಳಲುವಂತೆ ಆಗಿದ್ದು ಸಂಬಂಧ ಪಟ್ಟ ಅಧಿಕಾರಿಗಳು. ಗುತ್ತಿಗೆದಾರರು. ಗ್ರಾಮ ಪಂಚಾಯತಿಯವರು ಅಗತ್ಯ ಸುರಕ್ಷಿತ ಕ್ರಮಗಳನ್ನು ಕೈಗೊಂಡು ಪ್ರತಿ ದಿನ ಬೆಳಗ್ಗೆ ಸಂಜೆ. ಟ್ಯಾಂಕ್ ನಿಂದ ನೀರು ಹಾಕಿ . ದೂಳಿನಿಂದ ಮುಕ್ತಿಗೂಳಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಲೋಕೇಶ್ ಬೆಟ್ಟಗೆರೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಲೋಕೇಶ ಬೆಟ್ಟಗೆರೆ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಬಣಕಲ್ ಹೋಬಳಿ. ರಾಮಚಂದ್ರ. ನಂದೀಶ್. ಪುಟ್ಟಣ್ಣ.ಪ್ರವಿಣ್.ಇತರರು ಇದ್ದರು.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ