ಬಣಕಲ್ ರಿವರ್ ವ್ಯೂಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ:ತೆರೆದ ವೇದಿಕೆಯಲ್ಲಿ ಮಕ್ಕಳ ಹೆಜ್ಜೆ

ಬಣಕಲ್ :ಶನಿವಾರ ಶಾಲಾ ವಾರ್ಷಿಕೋತ್ಸವವನ್ನು ಬಣಕಲ್ ಪ್ರೌಢಶಾಲಾ ಆವರಣದಲ್ಲಿ ತೆರೆದ ವೇದಿಕೆಯಲ್ಲಿ ಮಾಡುವುದರ ಮೂಲಕ ಬಣಕಲ್ ರಿವರ್ ವ್ಯೂ ಶಾಲೆ ಗಮನ ಸೆಳೆಯಿತು. ರಿವರ್ ವ್ಯೂ ಶಾಲೆಯ ವಿದ್ಯಾರ್ಥಿಗಳು ಬರೋಬ್ಬರಿ ಮೂರುವರೆ ಗಂಟೆ ಕಾಲ ಸಾಹಸಭರಿತ. ಜಾನಪದ, ಶಾಸ್ತ್ರೀಯ ನೃತ್ಯಗಳ ರಸದೌತಣವನ್ನು ಪ್ರೇಕ್ಷಕರಿಗೆ ಉಣಬಡಿಸಿದರು. ಗಣ್ಯರ ಮಾತು ಮುಗಿದು ವೇದಿಕೆಯಲ್ಲಿ ಮಂದ ಬೆಳಕು ಮೂಡುತ್ತಿದ್ದಂತೆ ಹೆಜ್ಜೆ ಗೆಜ್ಜೆಯ ಸದ್ದು ಪ್ರೇಕ್ಷಕರ ಉಸಿರು ಬಿಗಿದಿರಿಸಿತು. ವಿದ್ಯಾರ್ಥಿಗಳು ದೇಶ ಹಾಗೂ ಸಂಸ್ಕೃತಿ ಬಿಂಬಿಸುವ 23ಕ್ಕೂ ಹೆಚ್ಚು ನೃತ್ಯಗಳನ್ನು ಪ್ರದರ್ಶಿಸಿದರು.ಮಿರುಗುವ ಭರತನಾಟ್ಯದ ಉಡುಗೆ ತೊಟ್ಟು ರಿವರ್ ವ್ಯೂ ವಿದ್ಯಾರ್ಥಿಗಳು ಶಿಸ್ತುಬದ್ದ ಲಯಬದ್ದ ಹೆಜ್ಜೆ ಪ್ರೇಕ್ಷಕರನ್ನು ಪುಳಕಿತಗೊಳಿಸಿದರು.ಮುದ್ದು ಮಕ್ಕಳ ವಿವಿಧ ರೀತಿಯ ವೇಷಭೂಷಣ ಮತ್ತಷ್ಟು ಮತ್ತಷ್ಟು ಮುದ್ದಾಗಿ ಕಾಣಿಸುತಿತ್ತು. ತುಂಟತನ, ಮುಗ್ಧತೆಯಿಂದ ನೃತ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ಮನಸ್ಸಿಗೂ ಮುದ ನೀಡಿದರು.
Lkg ಯಿಂದ 7ನೇ ತರಗತಿವರೆಗಿನ ಮಕ್ಕಳು ವಿವಿಧ ವೇಷಭೂಷಣ ಧರಿಸಿ ಬಂದಿದ್ದರು. ಪುಟಾಣಿಗಳು ಚಲನಚಿತ್ರ ಭಕ್ತಿ ಪ್ರದಾನ ಹಾಡಿಗೆ ಹೆಜ್ಜೆ ಹಾಕಿ ಗಮನಸೆಳೆದರು. ವಿವಿಧ ವೇಷ ಧರಿಸಿದ್ದ ಮಕ್ಕಳು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುವ ಪ್ರಯತ್ನ ಮಾಡುತ್ತಿದ್ದರೆ ಇಡೀ ಪ್ಷೇಕ್ಷಕ ಗಣ, ಚಪ್ಪಾಳೆಗಳ ಮೆಚ್ಚುಗೆಯ ಮಳೆಗೆರೆದರು.