ಬಣಕಲ್ ಕ್ರೈಸ್ತ ಅಭಿವೃದ್ಧಿ ಸಂಘದ ವತಿಯಿಂದ ಚಾರ್ಮಾಡಿ ಘಾಟಿಯಲ್ಲಿ ಸ್ವಚ್ಛತಾ ಕಾರ್ಯ

ಬಣಕಲ್: ಬಾಲಿಕಾ ಮರಿಯಾ ದೇವಾಲಯ ಬಣಕಲ್ ಹಾಗೂ ಕ್ರೈಸ್ತರ ಅಭಿವೃದ್ಧಿ ಸಂಘದ ವತಿಯಿಂದ ಕ್ರೈಸ್ತ ಬಾಂದವರು ಒಂದು ದಿನದ ಸ್ವಚ್ಛತಾ ಕಾರ್ಯಕ್ರಮವನ್ನು ಚಾರ್ಮಡಿ ಘಾಟಿಯಲ್ಲಿ ಹಮ್ಮಿಕೊಂಡಿದ್ದರು.

ಧರ್ಮ ಕೇಂದ್ರದ ಗುರುಗಳಾದ
ಫಾದರ್ ಲಾರೆನ್ಸ್ ಡಿಸೋಜಾ
ಕ್ರೈಸ್ತರ ಸಂಘದ ಅಧ್ಯಕ್ಷರಾದ ಫೇಡ್ರಿಕ್ ಲೋಬೊ
ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಹರ್ಷ ಮೇಲ್ವಿನ್ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಘಾಟ್ ರಸ್ತೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಕಸ, ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಸ್ವಚ್ಛಗೊಳಿಸಲಾಯಿತು. ಅವರು ತೊಡಗಿಸಿಕೊಂಡ ಈ ಕಾರ್ಯ ಜನಮನ ಸೆಳೆಯಿತು.

ಪ್ರಕೃತಿ ಮತ್ತು ವನ್ಯಜೀವಿಗಳಿಗೆ ಹಾನಿಯುಂಟುಮಾಡುವ ತ್ಯಾಜ್ಯವನ್ನು ತೆಗೆದುಹಾಕುವುದು, ಪರಿಸರವನ್ನು ಸ್ವಚ್ಛವಾಗಿ ಮತ್ತು ಸುಂದರವಾಗಿ ಇಡುವುದು ಈ ಕಾರ್ಯದ ಮುಖ್ಯ ಉದ್ದೇಶವಾಗಿದೆ ಎಂದು ಕ್ರೈಸ್ತರ ಸಂಘದ ಅಧ್ಯಕ್ಷರಾದ ಫೇಡ್ರಿಕ್ ಲೋಬೊ ಹೇಳಿದರು.
ವರದಿ ✍️ಸೂರಿ ಬಣಕಲ್