ಚಕ್ ಮಕ್ಕಿ ಬದ್ರಿಯಾ ಜುಮ್ಮಾ ಮಸೀದಿಯ ವಾರ್ಷಿಕ ಸಭೆ ಯಶಸ್ವಿ — ಎ.ಸಿ. ಅಯೂಬ್ ಹಾಜಿ ಅಧ್ಯಕ್ಷರಾಗಿ ಆಯ್ಕೆ

ಮೂಡಿಗೆರೆ ತಾಲ್ಲೂಕಿನ
ಚಕ್ ಮಕ್ಕಿ ಬದ್ರಿಯಾ ಜುಮ್ಮಾ ಮಸೀದಿಯ ವಾರ್ಷಿಕ ಸಾಮಾನ್ಯ ಸಭೆ ಉತ್ಸಾಹಭರಿತ ವಾತಾವರಣದಲ್ಲಿ ನಡೆಯಿತು. ಸಭಾಧ್ಯಕ್ಷರಾಗಿ ನಾಸೀರ್ ಎಂ. ರವರನ್ನು ಆಯ್ಕೆ ಮಾಡಿ ಅವರು ಸಭೆಯ ನೇತೃತ್ವ ವಹಿಸಿದರು. ಸಭೆಯು ನೂತನ ಕಮೀಟಿಯನ್ನು ರಚಿಸಲು ಸಂಪೂರ್ಣ ಅಧಿಕಾರವನ್ನು ಅವರಿಗೆ ನೀಡಿತು.
ಸಭೆಯಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಎ.ಸಿ. ಅಯೂಬ್ ಹಾಜಿ ಅವರು, “ಸೇವೆ, ಏಕತೆ, ಪ್ರಗತಿ” ಎಂಬ ಧ್ಯೇಯವಾಕ್ಯದೊಂದಿಗೆ ಮಸೀದಿ ಹಾಗೂ ಸಮುದಾಯದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು. ಸಮಾಜದ ಎಲ್ಲಾ ವರ್ಗಗಳ ಸಹಭಾಗಿತ್ವದೊಂದಿಗೆ ಬದ್ರಿಯಾ ಮಸೀದಿ ಪ್ರದೇಶವನ್ನು ಮಾದರಿ ಕೇಂದ್ರವನ್ನಾಗಿ ರೂಪಿಸುವುದು ನಮ್ಮ ಉದ್ದೇಶ ಎಂದರು.

ಸಭೆಯಲ್ಲಿ ಕಳೆದ ಸಾಲಿನ ಚಟುವಟಿಕೆಗಳ ವರದಿ ಮಂಡಿಸಲಾಯಿತು ಮತ್ತು ಸದಸ್ಯರು ಮುಂದಿನ ಸಾಲಿನ ಯೋಜನೆಗಳ ಕುರಿತು ಸಲಹೆ ನೀಡಿದರು. ಸಭೆಯ ಅಂತ್ಯದಲ್ಲಿ ಹೊಸ ಆಡಳಿತ ಮಂಡಳಿಯನ್ನು ಘೋಷಿಸಲಾಯಿತು.

2025–26ನೇ ಸಾಲಿನ ನೂತನ ಆಡಳಿತ ಮಂಡಳಿ
ಗೌರವಾಧ್ಯಕ್ಷರು,M. ಇಬ್ರಾಹೀಂ ಹಾಜಿ
ಅಧ್ಯಕ್ಷರು,ಎ.ಸಿ. ಅಯೂಬ್ ಹಾಜಿ
ಪ್ರಧಾನ ಕಾರ್ಯದರ್ಶಿ, ನಝೀರ್
ಉಪಾಧ್ಯಕ್ಷರು, M.A. ನಾಸೀರ್
ಜೊತೆ ಕಾರ್ಯದರ್ಶಿಗಳು, ಅಸ್ಗರ್ C.A., ಸಮೀರ್
ಸದಸ್ಯರು: M.A. ಮಜೀದ್, S. ಮಹಮ್ಮದ್, M. ಮೊಯ್ದೀನ್, A.C. ಆಸೀಫ್, ಫಾರುಕ್ ಬಣಕಲ್, B.A. ಉಮರ್ ಬಣಕಲ್, B.E. ಯಾಕುಬ್, B.E. ಕರೀಂ, ಮಸೂದ್ ಸಬ್ಬೇನಹಳ್ಳಿ, ಆಸೀಫ್ B.A., ನವಾಝ್, C.K. ಹಸನ್, ಇರ್ಷಾದ್ ಸಬ್ಬೇನಹಳ್ಳಿ.
ಸಭೆಯು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಸದಸ್ಯರು ಹೊಸ ಆಡಳಿತ ಮಂಡಳಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದರು.