ಈಶ ಫೌಂಡೇಶನ್ ವತಿಯಿಂದ ನಡೆದ ವಾಲಿಬಾಲ್ ಪಂದ್ಯಾವಳಿ:ಬಣಕಲ್ ತಂಡ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಇಶಾ ಫೌಂಡೇಶನ್ ತನ್ನ “ಗ್ರಾಮೋತ್ಸವ” ಎಂಬ ಕಾರ್ಯಕ್ರಮದ ಭಾಗವಾಗಿ ವಾಲಿಬಾಲ್ ಪಂದ್ಯಾವಳಿಗಳನ್ನು ಪ್ರತಿ ವರ್ಷ ನಡೆಸುತ್ತಾ ಬರುತ್ತಿದೆ. ಈ ಕಾರ್ಯಕ್ರಮದಲ್ಲಿ ವಾಲಿಬಾಲ್, ಥ್ರೋಬಾಲ್ ಮತ್ತು ಕಬಡ್ಡಿ ಆಟಗಳನ್ನು ಕ್ಲಸ್ಟರ್, ವಿಭಾಗ ಮತ್ತು ಫೈನಲ್ ಹಂತಗಳಲ್ಲಿ ನಡೆಸುತ್ತಾರೆ ವಿಜೇತ ತಂಡಗಳಿಗೆ ಉತ್ತಮ ಬಹುಮಾನಗಳನ್ನು ನೀಡುತ್ತ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದೆ.

ಇತ್ತೀಚೆಗೆ ಇಶಾ ಗ್ರಾಮೋತ್ಸವಮ್ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿ ಕುಂದಾಪುರದಲ್ಲಿ ನಡೆದಿತ್ತು.
ಈ ವಾಲಿಬಾಲ್ ಪಂದ್ಯ ಕೂಟದಲ್ಲಿ ಬಣಕಲ್ ತಂಡವು ಚಿಕ್ಕಮಗಳೂರು ಜಿಲ್ಲೆ ಯನ್ನು ಪ್ರತಿನಿಧಿಸಿತ್ತು. ಫೈನಲ್ ಪಂದ್ಯದಲ್ಲಿ ಪ್ರತಿಸ್ಪರ್ದಿ ತಂಡದ ಕೆಲವು ಘಟನಾವಳಿಗಳು ಆಯೋಜಕರಿಗೆ ತೃಪ್ತಿಯಾಗದ ಕಾರಣ ಪ್ರತಿಸ್ಪರ್ದಿ ತಂಡದ ಗೆಲುವನ್ನು ತಡೆ ಹಿಡಿದು ಬಣಕಲ್ ತಂಡವನ್ನು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಮಾಡಿದೆ.

ನ್ಯಾಷನಲ್ ಲೆವೆಲ್ ಪಂದ್ಯ ಕೂಟ ವು ತಮಿಳುನಾಡ್ ನಲ್ಲಿ ನಡಯಲಿದ್ದು ಕರ್ನಾಟಕ ರಾಜ್ಯ ವನ್ನು ಪ್ರತಿನಿಧಿಸುತ್ತಿರುವ ನಾಯಕ ಸೂಹೆಲ್, ಉಪನಾಯಕ ಕಿಶೋರ್, ಆದಿಲ್, ಕಿರಣ್, ಆಕಾಶ್, ಸಫಾನ್, ಅಭಿ, ನಿಹಾಲ್, ರಶೀದಿ, ರಿಫಾದ್ ಈ ವಾಲಿಬಾಲ್ ತಂಡ ಗೆಲುವಿನ ಕಿರೀಟದೊಂದಿಗೆ ಮರಳಲಿ ಎಂದು ಬಣಕಲ್ ಗ್ರಾಮಸ್ಥರ ಹಾರೈಕೆ.

ವರದಿ ✍️ಸೂರಿ ಬಣಕಲ್