ಬಣಕಲ್ :ತಾಲ್ಲೂಕ್ಕಿನ ಕಣಚೂರು ಗ್ರಾಮದ ನರೇಂದ್ರ ಗೌಡರ ಮನೆಯಲ್ಲಿ ನಾಗರ ಪಂಚಮಿಯ ದಿನದಂದೆ ಸಂಜೆ ಸುಮಾರು 6ಅಡಿ ಉದ್ದದ ನಾಗರ ಹಾವು ಮನೆಯ ಒಳಗೆ ಸೇರಿಕೊಂಡಿದೆ. ಇದರಿಂದ ಗಾಬರಿಗೊಂಡ ಮನೆಯವರು ಬಣಕಲ್ ಸ್ನೇಕ್ ಆರಿಫ್ ಅವರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಆರಿಫ್ ಅವರು ಕಾರ್ಯಾಚರಣೆ ನಡೆಸಿ ಹಾವನ್ನು ಸುರಕ್ಷಿತವಾಗಿ ಹಿಡಿದು ಚಾರ್ಮಾಡಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ವರದಿ :✍️ಸೂರಿ ಬಣಕಲ್