ಚಾಲಕನ ನಿಯಂತ್ರಣ ತಪ್ಪಿ ಆಟೋ ರಿಕ್ಷಾ ಪಲ್ಟಿ

ಬಣಕಲ್ :ಚಾಲಕನ ನಿಯಂತ್ರಣ ತಪ್ಪಿ ಆಟೋ ರಿಕ್ಷಾ ಪಲ್ಟಿಯಾಗಿರುವ ಘಟನೆ ಬಣಕಲ್ ಸಮೀಪದ ಹೆಬ್ರಿಗೆ ಎಂಬಲ್ಲಿ ನಡೆದಿದೆ.
ಚಂದುವಳ್ಳಿಯಿಂದ ಬಣಕಲ್ ಕಡೆಗೆ ಬರುತ್ತಿದ್ದ ವೇಳೆ ಹೆಬ್ರಿಗೆ ಸಮೀಪ ರಸ್ತೆಯಲ್ಲಿ ನಾಯಿ ಅಡ್ಡ ಬಂದ ಕಾರಣ ನಿಯಂತ್ರಣ ತಪ್ಪಿ ಬಿದ್ದಿದೆ. ಅದೃಷ್ಟವಷಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಚಂದುವಳ್ಳಿ ಗ್ರಾಮದ ಆಟೋ ಎಂದು ತಿಳಿದು ಬಂದಿದೆ.

ವರದಿ ✍️ಸೂರಿ ಬಣಕಲ್