ಆಟೊದಲ್ಲಿ ಆಯುಧ ಪತ್ತೆ: ಇಬ್ಬರು ಪೊಲೀಸ್ ವಶಕ್ಕೆಮೂಡಿಗೆರೆ:

ತಾಲ್ಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್ ಬಳಿ ಆಟೊ ರಿಕ್ಷಾ ದಲ್ಲಿ ಆಯುಧ ಪತ್ತೆಯಾಗಿದ್ದು, ಮಂಗಳೂರು ಮೂಲದ ಶೌಕತ್ ಹಾಗೂ ನೌಫಲ್ ಎಂಬ ಇಬ್ಬರು ವ್ಯಕ್ತಿಗಳನ್ನು ಬಣಕಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಕೊಟ್ಟಿಗೆಹಾರದ ತನಿಖಾಠಾಣೆ ಬಳಿ ಭಾನುವಾರ ಬೆಳಿಗ್ಗೆ ತನಿಖಾ ದಳದ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ, ಚಾರ್ಮಾಡಿ ಘಾಟಿ ಕಡೆಯಿಂದ ಬಂದ ಆಟೊವನ್ನು ಪರಿಶೀಲಿಸಲಾಗಿದ್ದು, ಆಟೊದೊಳಗೆ ಚಾಕು, ಹರ ಸೇರಿದಂತೆ ಆಯುಧಗಳು ಪತ್ತೆಯಾಗಿದ್ದರಿಂದ ಆಟೊದಲ್ಲಿದ್ದ ಮಂಗಳೂರು ತಾಲ್ಲೂಕಿನ ತೊಕ್ಕೊಟ್ಟು ಜಂಕ್ಷನ್ ನ ಶೌಕತ್ ಹಾಗೂ ಅರ್ಕುಳದ ನೌಫಲ್ ನನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.