ಬಣಕಲ್ : ಭಾನುವಾರದಂದು ಸಂಭ್ರಮದ 76ನೇ ಗಣರಾಜ್ಯೋತ್ಸವವನ್ನು ಬಣಕಲ್ ನ ಶಾಲಾ ಕಾಲೇಜಿನಲ್ಲಿ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಬಣಕಲ್ ನ ಸರ್ಕಾರಿ ಕನ್ನಡ ಶಾಲೆ,ರಿವರ್ ವ್ಯೂ ಶಾಲೆ, ಪ್ರೌಢಶಾಲೆ, ವಿದ್ಯಾಭಾರತಿ, ಉರ್ದು ಶಾಲೆ ಹಾಗೂ ಆಟೋ ಸಂಘ ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ ಧ್ವಜಾರೋಹಣ ಮಾಡುವುದರ ಮೂಲಕ ಸಡಗರ ಸಂಭ್ರಮದಿಂದ ಗಣ-ರಾಜ್ಯೋತ್ಸವ ದಿನವನ್ನು ಆಚರಿಸಿಕೊಂಡರು.
ಗಣರಾಜ್ಯೋತ್ಸವ ಪ್ರಯುಕ್ತ ವಿವಿಧ ಶಾಲಾ ಮಕ್ಕಳಿಂದ ಬಣಕಲ್ ರಾಜ ಬೀದಿಯಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು. ಮಕ್ಕಳು ನೀಡಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಣರಾ ಜ್ಯೋತ್ಸವಕ್ಕೆ ಮೆರಗು ನೀಡಿದವು ಉರ್ದು ಶಾಲಾ ಮಕ್ಕಳಿಂದ ಟ್ಯಾಬ್ಲೋ ಪ್ರದರ್ಶನ ನಡೆಯಿತು.ಬಣಕಲ್ ರಿವರ್ ವ್ಯೂ ಶಾಲಾ ಮಕ್ಕಳು ಪಿರಮಿಡ್ ರಚಿಸಿ ದೇಶ ಭಕ್ತಿ ಮೆರೆದರು. ಬಣಕಲ್ ಪ್ರೌಢ ಶಾಲಾ ಮಕ್ಕಳು ವಿಭಿನ್ನವಾಗಿ ಡಿ.ಜೆ. ಸದ್ದಿನೊಂದಿಗೆ ದೇಶ ಭಕ್ತಿ ಗೀತೆಗೆ ನೃತ್ಯ ಪ್ರದರ್ಶನ ನೀಡುವುದರ ಮೂಲಕ ನೋಡುಗರನ್ನು ಮಂತ್ರ ಮುಗ್ದ ಗೊಳಿಸಿದರು.ಮಕ್ಕಳು ರಸ್ತೆಯುದ್ಧಕ್ಕೂ ನೃತ್ಯ ಪ್ರದರ್ಶನ ನೀಡಿರುವುದು ಗಮನ ಸೆಳೆಯಿತು.
ಬಣಕಲ್ ಆರಕ್ಷಕ ಠಾಣೆ ಯವರು. ಬಣಕಲ್ ಫ್ರೆಂಡ್ಸ್ ಕ್ಲಬ್ ಸದಸ್ಯರು ಹಾಗೂ ಸಾರ್ವಜನಿಕರು ಮೆರವಣಿಗೆ ಯುದ್ಧಕ್ಕೂ ಮಕ್ಕಳಿಗೆ ತೊಂದರೆಯಾಗದ ರೀತಿಯಲ್ಲಿ ಪೊಲೀಸರೊಂದಿಗೆ ಕೈಜೋಡಿಸಿ ಕಾರ್ಯಕ್ರಮ ಯಶಸ್ಸಿಗೆ ಕೈಜೋಡಿಸಿದರು.
ವರದಿ ✍️ಸೂರಿ ಬಣಕಲ್