ಬಣಕಲ್ ಪ್ರೌಢ ಶಾಲೆಯಲ್ಲಿ ಜನವರಿ 3ರಂದು ವಿಜೃಂಭಣೆಯಿಂದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.
ಬಣಕಲ್ ಪ್ರೌಢ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದ ಅಧ್ಯಕ್ಷತೆಯನ್ನು ಶ್ರೀ ಬಿ. ಎಲ್. ದಿವಾಕರ್ ಅವರು ವಹಿಸಿದ್ದರು . ಕಾರ್ಯಕ್ರಮ ಆರಂಭಕ್ಕೂ ಮುನ್ನ ಶಾಲೆಗೆ ಕೊಡುಗೆಯಾಗಿ ನೀಡಿದ 22ಲಕ್ಷ ರೂ ಗಳ ಒಂಬತ್ತು ಡಿಜಿಟಲ್ ಬೋರ್ಡ್ ಗಳ ಉದ್ಘಾಟನೆ ಯನ್ನು ಲೂಯಿಸ್ ಡ್ರೆಪಸ್ ಕಂಪನಿ ಇಂಡಿಯಾ ಲಿಮಿಟೆಡ್ ಬೆಂಗಳೂರು ಇದರ ಮುಖ್ಯಸ್ಥ ಶ್ರೀ ಅನುಜ್ ಅಗ್ರವಾಲ್ ಉದ್ಘಾಟಿಸಿದರು. ಬಾಲ್ಯದ ಶಿಕ್ಷಣ ನಮ್ಮ ಭವಿಷ್ಯದ ಜೀವನಕ್ಕೆ ತಳಹದಿ ಕೇವಲ ಹಣ ಅಥವಾ ಆಸ್ತಿ ಸಂಪಾದನೆಗಿಂತ ಜ್ಞಾನಗಳಿಕೆಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು. ಮಕ್ಕಳು ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದು, ಮುಖ್ಯ ಅತಿಥಿ ಗಳಾದ ಶಾಲೆಯ ಹಳೆ ವಿದ್ಯಾರ್ಥಿ ರಾಯಚೂರಿನ. ನ್ಯಾಯದೀಶರಾದ ಸುದೀನ್ ಕುಮಾರ್ ಹೇಳಿದರು. ಪ್ರಧಾನ ಭಾಷಣಕಾರರಾಗಿ ಡಾ.ತಿರುಮಲೇಶ್ ಮಾತನಾಡಿ ಬಣಕಲ್ ಪ್ರೌಢಶಾಲೆ ತಾಲೂಕಿನ ಒಂದು ಉತ್ತಮ ಪ್ರೌಢಶಾಲೆಯಾಗಿದ್ದು ಎಲ್ಲಾ ವಿಭಾಗಗಳಲ್ಲೂ ಮುಂದಿರೋದು ಶ್ಲಾಘನೀಯ ಎಂದರು
ಬಣಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜರೀನಾ ಮಾತನಾಡಿ ಶಾಲೆಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ.ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಆದಿಲ್ ನಾಯಕತ್ವ ವಾಲಿಬಾಲ್ ತಂಡವನ್ನುಇದೆ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕ್ರೀಡಾ ಸಾಧನೆಗೈದ ವಿದ್ಯಾರ್ಥಿಗಳನ್ನು ಕೂಡ ಸನ್ಮಾನಿಸಲಾಯಿತು.ಕುll ಡಾಕ್ಟರ್ ಆಯಿಷಾ ನಮ್ರ ಕೊಟ್ಟಿಗೆಹಾರ,(ಹಳೆಯ ವಿದ್ಯಾರ್ಥಿ ಬಣಕಲ್ ಪ್ರಾಢಶಾಲೆ )ಶ್ರೀ ಲಿತಿನ್ ಬಾಳೂರು (ಹಳೆಯ. ವಿದ್ಯಾರ್ಥಿ, ಸಹ ಪ್ರಾಧ್ಯಾಪಕರು ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ)ಇವರಿಗೆ ಬಣಕಲ್ ಪ್ರಾಢಶಾಲೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳನ್ನಾಗಿ ಕರೆದು ಗೌರವಿಸಿ ಸನ್ಮಾನಿಸಲಾಯಿತು.ಶಾಲಾ ಮಕ್ಕಳಿಂದ ನೋಡುಗರನ್ನು ಮನೆ ಸೂರೆಗೊಳಿಸುವಂತಹ ವಿವಿಧ ಸಂಸ್ಕೃತಿ ಕಾರ್ಯಕ್ರಮ ನಡೆಯಿತು.ಸುತ್ತಮುತ್ತಲಿನ ಗ್ರಾಮಸ್ಥರು ಪೋಷಕರು ಕೊರೆವ ಚಳಿಯನ್ನು ಲೆಕ್ಕಿಸದೆ ಕಾರ್ಯಕ್ರಮ ಯಶಸ್ವಿಗೊಳ್ಳಲು ಸಹಕರಿಸಿದರು.ಬಣಕಲ್ ವಿದ್ಯಾ ಸಂಸ್ಥೆಯ. ಆಡಳಿತ ಮಂಡಳಿ ಬಿ. ಕೆ.ಪೃಥ್ವಿ, ಕೆ. ಕೆ. ಸುರೇಶ್, ಮಹಮ್ಮದ್ ಝಕಾವುಲ್ಲಾ, ಬಿ. ಆರ್. ಯತೀಶ್, ಕೆ. ಪಿ. ರಮೇಶ್,ಬಿ.ಟಿ. ಶರತ್, ಬಿ.ಬಿ. ಭರತ್, ಯಶ್ವಂತ್ ಬೆಳಗೋಡ್, ಸಿ.ಪಿ.ಪ್ರಸಾದ್, ಎಚ್. ಎಲ್. ಶರತ್. ರಿವರ್ ವ್ಯೂ ಶಾಲೆಯ ಮುಖ್ಯಸ್ಥ ಇಮ್ರಾನ್, ಕಾಫಿ ಬೆಳೆಗಾರರು ಶ್ರೀನಿವಾಸ್ ಗೌಡ,ವಿಶೇಷ ಸನ್ಮಾನಿತರಾದ ಡಾll ಎ.ಯು. ಪಾದೂರ್, ಹಿರಿಯ ವೈದ್ಯರು, ಶ್ರೀ ಚೆನ್ನಪ್ಪ ನಿವೃತ ಫಾರ್ಮಸಿ ಅಧಿಕಾರಿ,ನಿವೃತ ಜಾನುವಾರು ಅಧಿಕಾರಿ ಜೆ. ಲಿಯೋ ಸುದೇಶ್. ಮುಖ್ಯ ಶಿಕ್ಷಕರು ಶ್ರೀನಿವಾಸ್ ಹಾಗೂ. ಶಿಕ್ಷಕರ ವೃಂದ ಇನ್ನೂ ಮುಂತಾದವರು ಇದ್ದರು.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ