ಬಣಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಇಂದು ಮತದಾನ ಪ್ರಾರಂಭಗೊಂಡಿದ್ದು ಜಿದ್ದಾ ಜಿದ್ದಿನಿಂದೆ ಕೂಡಿದೆ. ಯಾರಿಗೆ ಅದೃಷ್ಟ ಲಕ್ಷ್ಮಿ ಒಲಿಯಲಿದೆ ಎಂದು ಕೆಲ ಗಂಟೆಯಲ್ಲಿ ತಿಳಿಯಲಿದೆ.ಅಭ್ಯರ್ಥಿಗಳ ಎದೆಯಲ್ಲಿ ಈಗಾಗಲೇ ಡವ ಡವ ಪ್ರಾರಂಭಗೊಂಡಿದೆ. ಬೆಳಗ್ಗೆ 9 ರಿಂದ ಮತದಾನ ಪ್ರಾರಂಭಗೊಂಡಿದ್ದು ಮತದಾರರು ಮತ ಚಲಾಯಿಸುತ್ತಿದ್ದಾರೆ. ಮತ ಚಲಾಯಿಸಲು 6 ಬೂತುಗಳನ್ನು ಮಾಡಲಾಗಿದೆ.
ಮತದಾರರು ಬಣಕಲ್ ಪ್ರೌಢ ಶಾಲೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದು ಸಂಜೆ 4:00 ಗಂಟೆಯವರೆಗೆ ಮತದಾನ ನಡೆಯಲಿದೆ ಬಳಿಕ ಮತ ಎಣಿಕೆ ನಡೆಯಲಿದ್ದು ವಿಜಯಿ ಅಭ್ಯರ್ಥಿಗಳ ಘೋಷಣೆಯಾಗಲಿದೆ