ಬೆಂಗಳೂರು,ಆ.5- ಅಕ್ರಮ ಹಣ ವರ್ಗಾವಣೆ, ಐಎಂಎ ಹಗರಣ ಸೇರಿದಂತೆ ಹಲವಾರು ವಿಚಾರಗಳಿಗೆ ಸಂಬಂಧಪಟ್ಟಂತೆ ರಿನಿರ್ದೇಶನಾಲಯ(ಇಡಿ)ದ ಅಕಾರಿಗಳು ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಶಾಸಕ ಜಮೀರ್ ಅಹಮ್ಮದ್ಖಾನ್, ಮಾಜಿ ಶಾಸಕ ರೋಷನ್ ಬೇಗ್ ಅವರುಗಳ ಮನೆ ಸೇರಿದಂತೆ ಆರು ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಮಾಜಿ ಸಚಿವರೂ ಆಗಿರುವ ಕಾಂಗ್ರೆಸ್ನ ಹಾಲಿ ಶಾಸಕ ಜಮೀರ್ ಅಹಮ್ಮದ್ಖಾನ್ ಅವರ ಕಂಟೋನ್ಮೆಂಟ್ ಬಳಿ ಬಂಬೂಬಜಾರ್ ನಲ್ಲಿರುವ ಮನೆ, ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಯುಬಿ ಸಿಟಿಯ ಪ್ಲಾಟ್, ವಸಂತನಗರದಲ್ಲಿರುವ ಹಳೆಯ ಮನೆ, ಸದಾಶಿವನಗರದಲ್ಲಿರುವ ಆಪ್ತರ ನಿವಾಸ, ಶಿವಾಜಿನಗರದಲ್ಲಿರುವ ಮಾಜಿ ಶಾಸಕ ರೋಷನ್ ಬೇಗ್ ಅವರ ಮನೆ ಸೇರಿದಂತೆ ಒಟ್ಟು ಆರು ಕಡೆ ಆದಾಯ ತೆರಿಗೆಯ ಇಬ್ಬರು ಮತ್ತು ಜಾರಿ ನಿರ್ದೇಶನಾಲಯದ 45ಕ್ಕೂ ಹೆಚ್ಚು ಅಕಾರಿಗಳು ಏಕ ಕಾಲಕ್ಕೆ ದಾಳಿ ಮಾಡಿ ತಪಾಸಣೆ ನಡೆಸಿದ್ದಾರೆ.
ಐಎಂಎ ಹಗರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಮನ್ಸೂರ್ ಆಲಿಖಾನ್ಗೆ ಜಮೀರ್ ಅಹಮ್ಮದ್ಖಾನ್ ರಿಚ್ಮಡ್ ಟೌನ್ನಲ್ಲಿರುವ 90 ಕೋಟಿಗಳಿಗೂ ಹೆಚ್ಚು ಬೆಲೆ ಬಾಳುವ ಬಂಗಲೆಯನ್ನು ಮಾರಾಟ ಮಾಡಿದ್ದರು. ಆದರೆ, ಸರ್ಕಾರಿ ದಸ್ತಾವೇಜ್ಗಳಲ್ಲಿ ಮಾರಾಟದ ವಹಿವಾಟಿನ ಮೌಲ್ಯವನ್ನು 9.38 ಕೋಟಿ ಎಂದು ತೋರಿಸಿ ತೆರಿಗೆ ವಂಚಿಸಲಾಗಿತ್ತು ಎಂಬ ಆರೋಪಗಳಿವೆ.
ಇದಕ್ಕೆ ಸಂಬಂಧಪಟ್ಟಂತೆ ಜಾರಿನಿರ್ದೇಶನಾಲಯ ಈಗಾಗಲೇ ನೋಟಿಸ್ ನೀಡಿ ವಿಚಾರಣೆ ನಡೆಸಿತ್ತು. ಆದರೆ, ಆ ಸಂದರ್ಭದಲ್ಲಿ ಅಕಾರಿಗಳ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದೆ ಮೂರು ತಿಂಗಳ ಕಾಲಾವಕಾಶ ಕೇಳಿದ್ದರು. ಆದರೆ, ನಿಗದಿತ ಕಾಲಮಿತಿಯಲ್ಲಿ ಉತ್ತರ ನೀಡಿರಲಿಲ್ಲ ಎಂದು ಹೇಳಲಾಗಿದೆ.