ಬಣಕಲ್: ಬೆಳಕು ಕಟ್ಟಡದ ಕೃಷಿ ಪತ್ತಿನ ಸಹಕಾರ ಸಂಘ (ನಿ) ದ ಉಪಾಧ್ಯಕ್ಷರಾಗಿ ಕೆ ಪಿ ರಮೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಉಪಾಧ್ಯಕ್ಷರಾಗಿದ್ದ ಬಣಕಲ್ ಗ್ರಾಮದ ರಂಗನಾಥ್ ರವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಕೆ ಪಿ ರಮೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಬಿ ಎಂ ಭರತ್, ನಿರ್ದೇಶಕರುಗಳಾದ ರಂಗನಾಥ್, ಗಜೇಂದ್ರ , ಕಲ್ಲೇಶ್, ಅಭಿಲಾಷ್, ನಾರಾಯಣ ಗೌಡ್ರು, ಬಿ ಎಸ್ ವಿಕ್ರಂ, ಶ್ಯಾಮಣ್ಣ, ಪ್ರದೀಪ್, ಚಂದ್ರಶೇಖರ್, ದಿಲ್ದಾರ್ ಬೇಗಂ, ಲಕ್ಷ್ಮಿ, ಮಮತಾ DCC ಬ್ಯಾಂಕ್ ನಾ ಮೇಲ್ವಿಚಾರಕಾರದ ಗುರುಮೂರ್ತಿ, ಹಾಗೂ ಮುಖ್ಯ ಕಾರ್ಯ ನಿರ್ವಹಣ ಅಧಿಕಾರಿ ನಿಶಾಂತ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ