ಬಣಕಲ್ : ವಿಮುಕ್ತಿ ಸ್ವ-ಸಹಾಯ ಸಂಘಗಳ ಒಕ್ಕೂಟ ಹಾಗೂ ಕಪುಚಿನ್ ಕೃಷಿಕ ಸೇವಾ ಕೇಂದ್ರ ಬಣಕಲ್ ಇವರ ವತಿಯಿಂದ ರಿವರ್ ವ್ಯೂ ಆಂಗ್ಲ ಮಾಧ್ಯಮ ಶಾಲೆ ಬಣಕಲ್ ಇಲ್ಲಿ ದಿನಾಂಕ 24-02-2024 ರಂದು “ಸುರಕ್ಷಿತ ಹಾಗೂ ಅಸುರಕ್ಷಿತ ಸ್ಪರ್ಶಗಳ” ಕುರಿತು ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾತ್ತು.
ಸಂಪನ್ಮೂಲ ವ್ಯಕ್ತಿಯಾಗಿ KHPTಯ ಬೆಳ್ತಂಗಡಿ ತಾಲೂಕಿನ ಸಂಯೋಜಕರಾದ ಶ್ರೀಮತಿ ಮಮತ ಇವರು ವಿದ್ಯಾರ್ಥಿನಿಯರಿಗೆ ಅಮೂಲ್ಯವಾದ ಮಾಹಿತಿಗಳನ್ನು ನೀಡಿದರು. ಅಲ್ಲದೆ ಮಕ್ಕಳ ಹಕ್ಕುಗಳ ಕುರಿತಾಗಿ ತಿಳಸಿದರು. ಇವರೊಂದಿಗೆ ಬಣಕಲ್ ನ ವಿಮುಕ್ತಿ ಒಕ್ಕೂಟದ ನಿರ್ದೇಶಕರಾದ ಫಾದರ್ ಎಡ್ವಿನ್ ಡಿ. ಸೋಜಾ ಇವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಮನಮೋಹನ್. ಬಿ. ಎಲ್ ಅಧ್ಯಕ್ಷತೆ ವಹಿಸಿದ್ದರು. ಸಹ ಶಿಕ್ಷಕಿಯಾದ ಶಬಾನಾ, ವಿಮುಕ್ತಿ ಸ್ವ-ಸಹಾಯ ಸಂಘಗಳ ಒಕ್ಕೂಟದ ಸಂಯೋಜಕರು ಶ್ರೀಮತಿ ವಿಂದ್ಯಾ ಶೆಟ್ಟಿ, ಬಣಕಲ್ ವಿಮುಕ್ತಿ ಒಕ್ಕೂಟದ ಕಾರ್ಯಕರ್ತೆ ಶ್ರೀಮತಿ ಪುಷ್ಪ ಇವರೊಂದಿಗೆ ಸಹ ಶಿಕ್ಷಕಿಯರು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿ” ಸುರಕ್ಷಿತ ಹಾಗೂ ಅಸುರಕ್ಷಿತ ಸ್ಪರ್ಶಗಳ” ಕುರಿತಂತೆ ಮಾರ್ಗದರ್ಶನ ಹಾಗೂ ಮಾಹಿತಿಗಳನ್ನು ಪಡೆದರು.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ