ಬಣಕಲ್ : 2019 ರ ಕನ್ನಡ ರಾಜ್ಯೋತ್ಸವ ಮೂಡಿಗೆರೆ ತಾಲೂಕಿನ ಪ್ರಶಸ್ತಿ ಪುರಸ್ಕೃತರು ಮಲೆನಾಡಿನ ಸೋಬಾನೆ ಪದ, ರಾಗಿ ಬಿಸೋ ಪದ, ನಾಟಿ ಪದ, ಜಾನಪದ ಗಾಯಕರಾಗಿದ್ದ ಸಬ್ಳಿಯ ಹಿರಿಯ ಜೀವ ಮಲ್ಲಮ್ಮರವರು ಭಾನುವಾರ ಬೆಳಿಗ್ಗೆ 11 ಗಂಟೆಗೆ ಹೃದಯಾಘಾತದಿಂದ ದೈವಾಧೀನರಾದರು.
ಸಬ್ಳಿ ಗ್ರಾಮದಲ್ಲಿ ಚಿಕ್ಕವರಿಂದ ಹಿಡಿದು ಎಲ್ಲರಿಗೂ ಮಲ್ಲಮ್ಮ ಅಜ್ಜಿ ಎಂದರೆ ಚಿರಪರಿಚಿತ ಹೆಸರು. ಬತ್ತ ನಾಟಿ ಸಮಯದಲ್ಲಿ ಇವರನ್ನು ಮರೆಯುವವರೇ ಇಲ್ಲ, ಗದ್ದೆ ನಾಟಿ ಮಾಡುವಾಗ ಅವರು ಹಾಡುತ್ತಿದ್ದ ನಾಟಿ ಪದ ಜೊತೆಯಲ್ಲಿ ಇದ್ದವರನ್ನು ಮಂತ್ರ ಮುಗ್ದಗೊಳಿಸುತಿತ್ತು. ಅವರ ಹಳ್ಳಿ ಸೊಗಡಿನ ಹಾಡುಗಾರಿಕೆಗೆ 2019ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರಕಿತ್ತು.
ಈಗಿನ ದಿನಗಳಲ್ಲಿ ಪಾಶ್ಚಿಮಾತ್ಯ ಹಾಡುಗಳೇ ಸದ್ದು ಮಾಡುತ್ತಿರುವಾಗ ಇಂದಿಗೂ ಸಹ ಹಳ್ಳಿಗಳಲ್ಲಿ ಜಾನಪದ, ನಾಟಿ ಪದ, ರಾಗಿ ಪದ ಜೀವಂತವಾಗಿದೆ ಎಂದರೆ ಅದಕ್ಕೆ ಮುಖ್ಯ ಕಾರಣಕರ್ತರು ನಮ್ಮ ಹೆಮ್ಮೆಯ ಮಲ್ಲಮ್ಮನಂತಹ ಹಿರಿಯ ಜೀವಗಳಿಂದ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಇಂದು ಅವರ ಅಗಲಿಕೆ ಗ್ರಾಮಸ್ಥರನ್ನು ನೋವಿನಲ್ಲಿ ಮುಳುಗುವಂತೆ ಮಾಡಿದೆ. ದೇವರು ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ.
ವರದಿ ✍️ಸೂರಿ ಬಣಕಲ್