ಬಣಕಲ್: 10 ವರ್ಷ ಜೈಲು ಶಿಕ್ಷೆಯೊಂದಿಗೆ ₹7 ಲಕ್ಷ ದಂಡ ವಿಧಿಸುವ ಹೊಸ ಹಿಟ್ ಅಂಡ್ ರನ್ ಕಾನೂನಿನ ವಿರುದ್ಧ ಟ್ರಕ್ ಚಾಲಕರು ಮೂಡಿಗೆರೆಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಇಂದು ಬೆಳಗ್ಗೆಯಿಂದ ಯಾವ ಲಾರಿ ಕೂಡ ಸಂಚಾರ ಮಾಡುವುದಿಲ್ಲ ತಾಲ್ಲೂಕ್ಕಿನಲ್ಲಿ ಎಲ್ಲಾ ಲಾರಿ ಚಾಲಕರು ಮುಷ್ಕರವನ್ನು ಬೆಂಬಲಿಸಲು ಮತ್ತು ತಮ್ಮ ವಾಹನಗಳನ್ನು ರಸ್ತೆಗಿಳಿಸದಂತೆ ಕೋರಲಾಗಿದೆ. ಇದರಿಂದಾಗಿ ಇಂದು ಲಾರಿ ಚಾಲಕರು ಲಾರಿಗಳನ್ನು ರಸ್ತೆಗಿಳಿಸುವುದಿಲ್ಲ ಎಂದು ಮೂಡಿಗೆರೆ ಲಾರಿ ಮಾಲೀಕರ ಸಂಘದ ಅಧ್ಯಕ್ಷರಾದ ಉಮ್ಮರ್ ಫಾರೂಕ್ ರವರು ತಿಳಿಸಿದ್ದಾರೆ .
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ