ಸಾಯಿ ಕೃಷ್ಣ ಆಸ್ಪತ್ರೆ ವತಿಯಿಂದ ಉಚಿತ ಅರೋಗ್ಯ ತಪಾಸಣಾ ಶಿಬಿರ ಮತ್ತು ಉಚಿತ ನೇತ್ರ ತಪಾಸಣಾ ಶಿಬಿರ:ಜನರಿಂದ ಉತ್ತಮ ಸ್ಪಂದನೆ

ಬಣಕಲ್: ಸಾಯಿ ಕೃಷ್ಣ ಹೆಲ್ತ್ ಸೆಂಟರ್ ಬಣಕಲ್, ಮೂಡಿಗೆರೆ ತಾಲೂಕು ಬಿವಿಕೆ ಇರ್ವತ್ರಾಯ ಮೆಮೋರಿಯಲ್ ಚಾರಿಟೇಬಲ್ ಫೌಂಡೇಶನ್ (ರಿ ) ಹಾಗೂ ಯೆನಪೋಯ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆಯುರ್ವೇದ ಅರೋಗ್ಯ ತಪಾಸಣಾ ಶಿಬಿರ ಉಚಿತ ನೇತ್ರ ತಪಾಸಣ ಶಿಬಿರವು ಸಾಯಿ ಕೃಷ್ಣ ಹೆಲ್ತ್ ಸೆಂಟರ್ ಬಣಕಲ್ನಲ್ಲಿ ಭಾನುವಾರ ನಡೆಯಿತು.

ಬೆಳಗ್ಗೆಯಿಂದ ನೂರಾರು ಜನರು ಆಗಮಿಸಿ ತಪಾಸಣೆ ಮಾಡಿಸಿಕೊಂಡರು. ಬಣಕಲ್ ಕೃಷ್ಣ ಆಸ್ಪತ್ರೆಯು ಸಾರ್ವಜನಿಕರಿಗೆ ಉಚಿತ ಶಿಬಿರಗಳನ್ನು ನಡೆಸುವ ಮುಖಾಂತರ ಬಡವರಿಗೆ ಒಳ್ಳೆಯ ಸೌಲಭ್ಯ ಒದಗಿಸುತ್ತಿದೆ ಎಂದು ಬಣಕಲ್ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮುಂದೆಯೂ ಈ ರೀತಿಯ ಉತ್ತಮ ಕೆಲಸಗಳು ಆಸ್ಪತ್ರೆವತಿಯಿಂದ ಇನ್ನೂ ಹೆಚ್ಚು ಹೆಚ್ಚು ನಡೆಸುವಂತಾಗಲಿ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ನವೀನ್ ಭಟ್ ವಹಿಸಿದ್ದರು.

ಕಾರ್ಯಕ್ರಮ ಉದ್ಘಾಟನೆಯನ್ನು ಶ್ರೀ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಮೂಡಿಗೆರೆ ವಲಯ ನಿರ್ದೇಶಕರಾದ ಶಿವಾನಂದ ಮಾಡಿದರು. ಶ್ರೀ ಕೃಷ್ಣ ಆಸ್ಪತ್ರೆ ಮತ್ತು ಸಮೂಹ ಸಂಸ್ಥೆಗಳ ವೈದ್ಯಕೀಯ ನಿರ್ದೇಶಕರಾದ ಡಾ. ಮುರುಳಿಕೃಷ್ಣ ಇರ್ವತ್ರಾಯ ಸ್ವಾಗತಿಸಿ ಪ್ರಸ್ತಾವನೆ ಮಾತನಾಡಿದರು.

ಸಭೆಯಲ್ಲಿ ಬಣಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆತಿಕ ಬಾನು. ಅಶ್ರೀತ್ ಗೌಡ ಅಧ್ಯಕ್ಷರು ಬಿ. ಹೊಸಹಳ್ಳಿ.ಲವಕುಮಾರ್.ಭಾಗವಹಿಸಿದ್ದರು.

Sahifa Theme License is not validated, Go to the theme options page to validate the license, You need a single license for each domain name.