ಬಣಕಲ್ : ರಸ್ತೆ ಮದ್ಯೆ ಮಲಗಿದ್ದ ಬಿಡಾಡಿ ದನಗಳಿಂದ ಹೆದ್ದಾರಿಯಲ್ಲಿ ಬೈಕ್ನಲ್ಲಿ ಹೋಗುತ್ತಿದ್ದ ಅಮಾಯಕ ಯುವಕನೊಬ್ಬ ಗೂಳಿಗೆ ಡಿಕ್ಕಿ ಹೊಡೆದು ಜೀವ ಕಳೆದುಕೊಂಡ ಘಟನೆ ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜನ್ನಾಪುರದ ಹೊಯ್ಸಳಲು ನಿವಾಸಿಯಾದ ಮೋಹನ್ ಎಂದು ಗುರುತಿಸಲಾದ ಬಲಿಪಶು ಕೆಲಸದ ನಿಮಿತ್ತ ಬಾಳೆಹೊಳೆಗೆ ಹೋಗಿ ಕೊಟ್ಟಿಗೆಹಾರ ಮಾರ್ಗವಾಗಿ ಜನ್ನಾಪುರಕ್ಕೆ ತೆರಳುತ್ತಿದ್ದಾಗ ರಸ್ತೆಗೆ ಅಡ್ಡ ಬಂದ ದನಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ದನದ ಕೊಂಬು ತಲೆಗೆ ಬಡಿದು ತೀವ್ರ ಪೆಟ್ಟಾಗಿತ್ತು. ಅವರನ್ನು ಮೊದಲು ಚಿಕಿತ್ಸೆಗಾಗಿ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೋಯ್ಯಲಾಗಿತ್ತು , ಆದರೇ ಅವರಿಗೆ ತಲೆಗೆ ತೀವ್ರ ಪೆಟ್ಟಾದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ನಿಧನ ಹೊಂದಿದ್ದಾರೆ.
ನಗರದಲ್ಲಿ ಬಿಡಾಡಿ ದನಗಳ ಸಮಸ್ಯೆ ಹಿಂದಿನಿಂದಲೂ ಇದೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಇನ್ನೂ ಎಷ್ಟು ಜೀವಗಳು ಬಲಿಯಾಗಬೇಕಿದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ ಆದಷ್ಟು ಬೇಗ ಬಿಡಾಡಿ ದನಗಳ ಬಗ್ಗೆ ಕ್ರಮ ಕೈಗೊಳ್ಳದೆ ಇದ್ದರೆ ಪ್ರತಿಭಟನೆ ಮಾಡಲಾಗುವುದು ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ವರದಿ :ಸೂರಿ ಬಣಕಲ್