ಎನ್.ಸಿ.ಸಿ.ರಾಷ್ಟಮಟ್ಟದ ಬೋಟ್ ಪುಲ್ಲಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದ ಕರ್ನಾಟಕ: ತಂಡವನ್ನು ಪ್ರತಿನಿಧಿಸಿದ್ದ ಬಣಕಲ್ ದೊಡ್ಡನಂದಿ ಗ್ರಾಮದ ಅಂಕಿತ್

ಬಣಕಲ್ :ಇತ್ತೀಚೆಗೆ ಮಹಾರಾಷ್ಟ್ರದ ಲೋನವಾಲದ ಐ ಎನ್ ಎಸ್ ಶಿವಾಜಿ ಸೇನಾ ನೆಲೆಯಲ್ಲಿ ಹಮ್ಮಿಕೊಂಡಿದ್ದ ಎನ್.ಸಿ.ಸಿ. ನೇವಿ ರಾಷ್ಟ್ರಮಟ್ಟದ ಶಿಬಿರದಲ್ಲಿ ಹಮ್ಮಿಕೊಂಡಿದ್ದ ಬೋಟ್ ಫುಲ್ಲಿಂಗ್ ಸ್ಪರ್ಧೆಯಲ್ಲಿ ಕರ್ನಾಟಕ ಗೋವಾ ಡೈರಕ್ಟರೇಟ್ ತಂಡ ಕಂಚಿನ ಪದಕವನ್ನು ಗಳಿಸಿದೆ.

ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ ತಂಡದಲ್ಲಿ 6+2(8)ಸದಸ್ಯರು ಪ್ರತಿನಿಧಿಸುತ್ತಾರೆ. ಅದರಲ್ಲಿ ಬಣಕಲ್ ನ ದೊಡ್ಡನಂದಿ ಗ್ರಾಮದ ಅಂಕಿತ್ ಅವರು ಒಬ್ಬರು. ಇವರು ಉಜಿರೆಯ SDM ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ.

ದೊಡ್ಡನಂದಿ ಗ್ರಾಮದ ಹುಡುಗ ಡೈರೆಕ್ಟರೇಟ್ ತಂಡದಲ್ಲಿ ಅಡಿ ಗಮನ ಸೆಳೆದಿರುವುದಕ್ಕೆ ಗ್ರಾಮಸ್ಥರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ದೊಡ್ಡನಂದಿ ಗ್ರಾಮದ ಅಶೋಕ್, ವೀಣಾದಂಪತಿಯರ ಪುತ್ರರಾಗಿದ್ದಾರೆ.

ವರದಿ ✍️:ಸೂರಿ ಬಣಕಲ್