ಈಶ ಫೌಂಡೇಷನ್ನ ಸಾಮಾಜಿಕ ಅಭಿವೃದ್ಧಿ ಅಂಗವಾದ ಈಶ ಔಟ್ರೀಚ್ ವತಿಯಿಂದ ಕರ್ನಾಟಕದ 13ಜಿಲ್ಲೆಗಳ 3200ಕ್ಕೂ ಹಳ್ಳಿಗಳಲ್ಲಿ ಈಶ ಗ್ರಾಮೋತ್ಸವಕ್ಕೆ ನಡೆದಿತ್ತು .ಗ್ರಾಮೀಣ ಭಾರತದ ಅತಿ ದೊಡ್ಡ ಕ್ರೀಡಾಕೂಟ ಚಿಕ್ಕಮಗಳೂರಿನಲ್ಲಿ ನಡೆಯಿತು. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಯ ವಾಲಿಬಾಲ್ ತಂಡಗಳು ಭಾಗವಹಿಸಿದ್ದವು. ತೀವ್ರ ಪೈಪೋಟಿಯಿಂದ ನಡೆದ ಪಂದ್ಯದಲ್ಲಿ ಬಣಕಲ್ ನ ಅಲಿಫ್ ಸ್ಟಾರ್ ತಂಡ ಉತ್ತಮ ಪ್ರದರ್ಶನ ನೀಡಿ ರನ್ನರ್ ಅಪ್ ಆಗಿ ಮುಂದಿನ ಹಂತಕ್ಕೆ ಪ್ರವೇಶ ಪಡೆದಿದೆ. ಆಟಗಾರರಾದ ಕಿಶೋರ್, ನಿಹಾಲ್, ಸೂಹೆಲ್, ರೀಫಾದ್, ರಶೀದ್, ಉಲ್ಲಾಸ್ ಅಭಿಷೇಕ್, ಕಾರ್ತಿಕ್, ಆಕಾಶ್, ಕಿರಣ, ಆದಿಲ್ ಭಾಗವಹಿಸಿದ್ದರು.ಮುಂದಿನ ಹಂತ ಮೈಸೂರ್ ನಲ್ಲಿ ನಡೆಯಲಿದ್ದು,ಬಣಕಲ್ ಗ್ರಾಮ ಪಂಚಾಯಿತಿ ಹೆಸರು ಜಿಲ್ಲೆಯಲ್ಲಿ ಮೊಳಗುವಂತೆ ಮಾಡಿದ್ದಾರೆ ಮೈಸೂರು ನಲ್ಲಿ ಕೂಡ ಇದೆ ರೀತಿ ಯಶಸ್ಸು ದೊರಕಲಿ ಎಂದು ಅಲಿಫ್ ಸ್ಟಾರ್ ತಂಡಕ್ಕೆ ಬಣಕಲ್ ನ್ಯೂಸ್ ತಂಡದ ವತಿಯಿಂದ ಶುಭ ಹಾರೈಕೆ.✍️ ವರದಿ:ಸೂರಿ ಬಣಕಲ್
