ಬಣಕಲ್ :ಆಕಸ್ಮಿಕವಾಗಿ ಸಿಕ್ಕ ಮೊಬೈಲ್ ನ್ನು ಕಳೆದುಕೊಂಡ ವ್ಯಕ್ತಿಗೆ ಹಿಂದಿರುಗಿಸಿ ಮಾನವೀಯತೆ ಮೆರೆದ ಘಟನೆ ಬಣಕಲ್ ನಲ್ಲಿ ನಡೆದಿದೆ. ಶಿವಮೊಗ್ಗ ಮೂಲದ ಯುವಕರು ಕಾಫಿನಾಡಿನಲ್ಲಿ ಪ್ರವಾಸಕ್ಕೆ ಬಂದಿದ್ದರು ಕೂವೇ ಮಾರ್ಗವಾಗಿ ತೆರಳುತ್ತಿದ್ದ ವೇಳೆ ಮೊಬೈಲ್ ಕಳೆದು ಕೊಂಡಿದ್ದಾರೆ. ಅದೇ ಸಂದರ್ಭದಲ್ಲಿ ಆ ಮಾರ್ಗದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಅದಂ(ಕುಟ್ಟ )ಹೋಗುತ್ತಿದ್ದರು ಈ ಸಂದರ್ಭದಲ್ಲಿ ಎಂ ಐ ಕಂಪನಿಯ 15000ರೂ ಬೆಲೆ ಬಾಳುವ ಮೊಬೈಲ್ ಸಿಕ್ಕಿದ್ದು ನಂತರ ಮೊಬೈಲ್ ನಲ್ಲಿ ಇರುವಂಥ ನಂಬರ್ ಗಳನ್ನು ಪರಿಶೀಲಿಸಿ ಕರೆ ಮಾಡಿ ಕಳೆದುಕೊಂಡ ವ್ಯಕ್ತಿಯನ್ನು ಸಂಪರ್ಕಿಸಿ ಕಳೆದುಕೊಂಡ ವ್ಯಕ್ತಿಯ ಸ್ನೇಹಿತ ಧನುಷ್ (ಮೂಡಿಗೆರೆ)ರವರಿಗೆ ವಾಪಾಸ್ ನೀಡಿ ಮಾನವೀಯತೆ ಮೆರೆದಿದ್ದಾರೆ ಮೊಬಲನ್ನು ಹಿಂದಿರುಗಿಸಿದಕ್ಕೆ ಅದಂ ರವರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ