ಬಣಕಲ್:ಸುಭಾಷ್ ನಗರ ಕುವೆಂಪುನಗರ ನರಿಗುಡ್ಡೆ ಹೊರಟ್ಟಿ ಗುಡ್ಡೆಟ್ಟಿ ಸಾಗುವ ರಸ್ತೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು..ಗ್ರಾಮಸ್ಥರು ಚುನಾವಣೆ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದ್ದರು ಆ ಸಂದರ್ಭದಲ್ಲಿ ಚುನಾವಣೆ ಮುಗಿದ ತಕ್ಷಣ ರಸ್ತೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದ್ದರು.ಅದರಂತೆ ಬಣಕಲ್ ಗುಡ್ಡೆಟ್ಟಿ ರಸ್ತೆ ಅಭಿವೃದ್ಧಿಗಾಗಿ ಶಾಸಕರ ನಿಧಿಯಿಂದ 1ಕೋಟಿ ರೂಗಳ ಅನುದಾನವನ್ನು ಗುಡ್ಡೆಟ್ಟಿ ರಸ್ತೆ ಕಾಮಗಾರಿಗೆ ಮೀಸಲಾಗಿಡಲಾಗಿತ್ತು. ಗ್ರಾಮ ಪಂಚಾಯತಿ ಚುನಾವಣೆ ನೀತಿಸಂಹಿತೆ ಕಾರಣ ಕಾಮಗಾರಿಗೆ ಬ್ರೇಕ್ ಬಿದ್ದಿತ್ತು.ಚುನಾವಣೆ ಮುಗಿದ ತಕ್ಷಣ ಕಾಮಗಾರಿಗೆ ಚಾಲನೆ ದೊರಕಿದೆ ಸುಭಾಷ್ ನಗರ ದಿಂದ ಗುಡ್ಡೆಟ್ಟಿ ವರೆಗೆ ಕಾಂಕ್ರಿಟ್ ಕಾಮಗಾರಿ ಪ್ರಾರಂಭವಾಗಿದೆ ಇಂದು ತಾಲೂಕಿನ ಬಣಕಲ್ ಗ್ರಾಮದ ಗುಡ್ಡೆಟ್ಟಿ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಶಾಸಕ ಎಂಪಿ ಕುಮಾರಸ್ವಾಮಿ ಹಾಗೂ ವಿಧಾನ ಪರಿಷತ್ ಉಪ ಸಬಾಪತಿ ಎಂ ಕೆ ಪ್ರಾಣೇಶ್ ವೀಕ್ಷಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಂಪಿ ಕುಮಾರಸ್ವಾಮಿ
ತಾಲೂಕಿನ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಗುರಿ ಆಗಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಆಗುವುದಿಲ್ಲ. ಗುಣಮಟ್ಟದ ಕಾಮಗಾರಿಯನ್ನು ಗುತ್ತಿಗೆದಾರರು ಮಾಡಬೇಕು. ಕಾಮಗಾರಿ ನಡೆಯುವಾಗ ಸ್ಥಳೀಯರು ನಿಂತು ಕಾಮಗಾರಿ ಮಾಡಿಸಿಕೊಳ್ಳಬೇಕು. ಸಾಕಷ್ಟು ಅನುದಾನವನ್ನು ಸರ್ಕಾರದಿಂದ ತಂದಿರುವುದರಿಂದ ಗ್ರಾಮಗಳಲ್ಲಿ ಕಾಂಕ್ರೀಟ್ ಮತ್ತು ಡಾಂಬರೀಕರಣವಾಗುತ್ತಿದೆ. ಎಂದು ಹೇಳಿದರು ವಿಧಾನ ಪರಿಷತ್ ಉಪ ಸಭಾಪತಿ ಎಂ ಕೆ ಪ್ರಾಣೇಶ್ ಮಾತನಾಡಿ, ಸರ್ಕಾರ ದಿಂದ ಗ್ರಾಮಗಳಲ್ಲಿ ಹೆಚ್ಚಿನ ಮೂಲಭೂತ ಸೌಲಭ್ಯಗಳು ದೊರೆಯುತ್ತಿದೆ . ಗ್ರಾಮಗಳು ಅಭಿವೃದ್ಧಿ ಆದರೆ ದೇಶ ಅಭಿವೃದ್ಧಿ ಹೊಂದಲಿದೆ ಎಂದರು. ಈ ವೇಳೆ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ರತನ್. ಬಿಜೆಪಿ ಮುಖಂಡರಾದ ವಿಕ್ರಂಗೌಡ ಸ್ಥಳೀಯರಾದ ಅರುಣ್ ಪೂಜಾರಿ ಪ್ರಕಾಶ್. ಜಗದೀಶ್. ಮುಂತಾದವರು ಇದ್ದರು.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ