ಬಣಕಲ್: ಸ.ಹಿ.ಪ್ರಾ.ಶಾಲೆ, ಮತ್ತಿಕಟ್ಟೆಯಲ್ಲಿ ಬ್ಯಾಗ್ ರಹಿತ ದಿನದ ಅಂಗವಾಗಿ ಸಾಹಿತ್ಯ ವಾಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಲೋಕದ ಪ್ರಮುಖ ಮಕ್ಕಳ ಕೃತಿಯಾದ ಕುವೆಂಪು ಅವರ ಬೊಮ್ಮನಹಳ್ಳಿಯ ಕಿಂದರಿಜೋಗಿ ಕೃತಿಯ ವಾಚನ ಮಾಡಿ ಅರ್ಥ ವಿವರಣೆ ನೀಡಲಾಯಿತು. ನೈತಿಕ ಮೌಲ್ಯಗಳ ಜೊತೆಗೆ ಹಾಸ್ಯದ ಲೇಪನವನ್ನು ಹೊಂದಿರುವ ಬೊಮ್ಮನಹಳ್ಳಿ ಕಿಂದರಿಜೋಗಿ ಕೃತಿಯ ಕಥಾ ಹಂದರಕ್ಕೆ ಮಾರು ಹೋದ ಮಕ್ಕಳು ಬೆರಗಿನ ಪ್ರತಿಕ್ರಿಯೆ ನೀಡಿದರು. ಅಲ್ಲದೇ ಹೆಚ್ಚಿನ ಸಾಹಿತ್ಯ ಕೃತಿಗಳನ್ನು ಓದುವ ಇಂಗಿತ ವ್ಯಕ್ತಪಡಿಸಿದರು.
ಶಿಕ್ಷಕ ಪೂರ್ಣೇಶ್ ಮತ್ತಾವರ ಸಾಹಿತ್ಯ ವಾಚನ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು. ಶಾಲಾ ಸಹ ಶಿಕ್ಷಕರಾದ ಶ್ರೀ ರಘು ಮತ್ತು ಶ್ರೀಮತಿ ಅಶ್ವಿನಿ ಉಪಸ್ಥಿತರಿದ್ದರು.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ