ಬಣಕಲ್ : ಮೂರು ವರ್ಷಗಳ ಹಿಂದೆ ಮಲೆನಾಡಿನಲ್ಲಿ ಬಂದ ಮಹಾ ಮಳೆಗೆ ಬಣಕಲ್ ನ ಕೆಂಬಲ್ ಮಟ ರಸ್ತೆ ಕುಸಿತ ಗೊಂಡಿತ್ತು. ಅಧಿಕಾರಿಗಳ ತಂಡ ಬಂದು ಪರಿಶೀಲಿಸಿ ಆದಷ್ಟು ಬೇಗ ಕಾಮಗಾರಿ ಪ್ರಾರಂಬಿಸುವ ಭರವಸೆ ನೀಡಿದ್ದರು. ಆದರೆ ವರ್ಷ ಮೂರು ಕಳೆದರೂ ಯಾವುದೇ ಅಧಿಕಾರಿಗಳಾಗಲಿ ಜನಪ್ರತಿನಿದಿಗಳಾಗಲಿ ಇತ್ತ ತಲೆ ಹಾಕಿ ಮಲಗಿಲ್ಲ ಎಂದು ಗ್ರಾಮಸ್ಥ ಲಕ್ಷ್ಮಣ್ ದೂರಿದರು. ಹಲವಾರು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನ ವಾಗಿಲ್ಲ ಎಂದರು.ಮಳೆ ಬಂದಾಗ ನೀರೆಲ್ಲಾ ಮನೆಗೆ ನುಗ್ಗುತ್ತಿದೆ ರಸ್ತೆ ಕುಸಿತಗೊಂಡು ವರ್ಷ ಮೂರು ಕಳೆದರೂ ಅಧಿಕಾರಿಗಳ ಹಾಗೂ ಜನಪ್ರತಿನಿದಿನಗಳ ನಿರ್ಲಕ್ಷತನದಿಂದ ಇದುವರೆಗೂ ಯಾವುದೇ ಕಾಮಗಾರಿ ಕೈಗೊಂಡಿಲ್ಲ ಎಂಬುದು ಲಕ್ಷ್ಮಣ್ ರವರ ಆರೋಪವಾಗಿದೆ ಮೂರು ವರ್ಷಗಳಿಂದ ಲಕ್ಷ್ಮಣ್ ರವರು ಆತಂಕದಿಂದ ಬದುಕು ಸಾಗಿಸುತ್ತಿದ್ದಾರೆ ಮಳೆ ಬಂದಾಗ ರಸ್ತೆ ಮೇಲೆ ಹರಿಯುವ ದುರ್ವಾಸನೆ ಬೀರುವ ನಿರೆಲ್ಲಾ ಮನೆಯ ಒಳಗೆ ನುಗ್ಗುತ್ತಿದೆ ಮನೆಯ ಸುತ್ತೆಲ್ಲ ನೀರು ನಿಲ್ಲುವುದರಿಂದ ಮನೆ ಕುಸಿತ ಗೊಳ್ಳುವಭೀತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವಾಹನ ಸವರಾರು ಸಹ ಸ್ವಲ್ಪ ಎಚ್ಚರ ತಪ್ಪಿದರೂ ಕೆಳಗೆ ಬೀಳುವುದು ಗ್ಯಾರಂಟಿ. ತಡೆ ಗೋಡೆ ಇಲ್ಲದಿರುವುದರಿಂದ ತಿರುವು ಇರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ ಎಂದರು . ಪ್ರತಿದಿನ ನೂರಾರು ವಾಹನಗಳು ಈ ರಸ್ತೆ ಮೂಲಕ ಸಂಚರಿಸುತ್ತಿವೆ. ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂಯಾವುದೇ ಕ್ರಮ ಕೈಗೊಳ್ಳದಿರುವುದು ಸವಾರರು ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತಡೆಗೋಡೆ ಇಲ್ಲದಿರುವುದರಿಂದ ವಾಹನದಾರರು ಅಷ್ಟೇ ಅಲ್ಲ. ಬದಲಾಗಿ ಪಾದಾಚಾರಿಗಳು ಸಹ ಜಾಗರೂಕತೆಯಿಂದ ನಡೆದುಕೊಂಡು ಹೋಗಬೇಕು. ರಾತ್ರಿ ಹೊತ್ತಲ್ಲಿ ಸ್ವಲ್ಪ ಆಯತಪ್ಪಿದರೂ ಕೆಳಗೆ ಬೀಳುವ ಅಪಾಯವಿದೆ ಎಂದರು.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ