ಅಕ್ರಮ ಬಾಂಗ್ಲಾ ವಲಸಿಗರು ಮತ್ತು ರೋಹಿಂಗ್ಯಾ ಮುಸ್ಲಿಮರನ್ನು ಭಾರತದಿಂದ ಹೊರ ಹಾಕುವಂತೆ ಮೂಡಿಗೆರೆ ಬಜರಂಗದಳ ಆಗ್ರಹ.

ಮಾನ್ಯ ಸರ್ವೋಚ್ಛ ನ್ಯಾಯಾಲಯ ಆದೇಶ ಮಾಡಿರುವ ರೀತಿಯಲ್ಲಿ ಭಾರತ ದೇಶದಲ್ಲಿ ಅಡಗಿ ಕುಳಿತಿರುವ ಅಕ್ರಮ ಬಾಂಗ್ಲಾದೇಶಿ ನುಸುಳುಕೋರರು ಹಾಗೂ ರೋಹಿಂಗ್ಯಾ ಮುಸಲ್ಮಾನರು ಗಳನ್ನು ತಕ್ಷಣ ಬಾಂಗ್ಲಾದೇಶಕ್ಕೆ ಅವರನ್ನು ಗಡೀಪಾರು ಮಾಡಬೇಕೆಂಬ ಆದೇಶವನ್ನು ಈ ಕೂಡಲೇ ಅನುಷ್ಠಾನ ಗೊಳಿಸುವಂತೆ ಮೂಡಿಗೆರೆ ಬಜರಂಗದಳದ ವತಿಯಿಂದ ಇಂದು ಮೂಡಿಗೆರೆ ವೃತ್ತ ನಿರೀಕ್ಷಕರು ಮತ್ತು ತಹಸೀಲ್ದಾರರ ಮೂಲಕ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು

ಸರ್ವೋಚ್ಛ ನ್ಯಾಯಾಲಯ ಮಾಡಿರುವ ಆ ದೇಶದಲ್ಲಿ ಅಕ್ರಮವಾಗಿ ಭಾರತ ದೇಶದ ಒಳಗೆ ನುಸುಳಿ ಬಂದು ಅನೇಕ ರೀತಿಯ ವಿದ್ವಂಸಕ ಕೃತ್ಯವನ್ನು ಮತ್ತು ಅತ್ಯಾಚಾರ ಕಳ್ಳತನ ಕೊಲೆ ದಂಗೆಗಳು ಮಾಡಿ ಇಡೀ ಸಮಾಜವನ್ನು ಭಯ ಭೀತಿ ಗೊಳಿಸುವ ಕಾರ್ಯದಲ್ಲಿ ತೊಡಗಿರುವ ಅಕ್ರಮ ಬಾಂಗ್ಲಾದೇಶಿ ಹಾಗೂ ರೋಹಿಂಗ್ಯಾ ಮುಸಲ್ಮಾನರನ್ನು ತಕ್ಷಣ ಭಾರತ ದೇಶದಿಂದ ಅವರನ್ನು ಬಾಂಗ್ಲಾಗೆ ಗಡಿಪಾರು ಮಾಡಬೇಕೆಂಬ ಆದೇಶವನ್ನು ಜಾರಿ ಮಾಡಬೇಕು

ಈ ಸಂದರ್ಭದಲ್ಲಿ ಮೂಡಿಗೆರೆ ಬಜರಂಗ ದಳದ ತಾಲ್ಲೂಕು ಸಂಚಾಲಕ ವಿನಯ್ ಶೆಟ್ಟಿ ಮಾತನಾಡಿ ರೋಹಿಂಗ್ಯಾ ಮುಸಲ್ಮಾನರು ಅಕ್ರಮ ಬಾಂಗ್ಲಾದೇಶಿ ಮುಸಲ್ಮಾನರು ಗಳು ಇಡೀ ದೇಶದ ಮೂಲೆ ಮೂಲೆಗಳಲ್ಲಿ ಕಾರ್ಮಿಕರ ಸೋಗಿನಲ್ಲಿ ಒಳಹೊಕ್ಕಿ ದುಷ್ಕೃತ್ಯ ನಡೆಸಲು ಎಲ್ಲ ಸಿದ್ಧತೆ ನಡೆಸುತ್ತಿದ್ದಾರೆ ಭಯೋತ್ಪಾದನಾ ಚಟುವಟಿಕೆಗಳು ಮತ್ತು ಕೋಮು ಗಲಭೆ ಮಾಡಲು ಸಜ್ಜಾಗಿದ್ದಾರೆ
ಇವರ ಬಳಿ ಇರುವ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡಿ ಅಕ್ರಮ ಬಾಂಗ್ಲಾದೇಶಿ ಹಾಗೂ ರೋಹಿಂಗ್ಯಾ ಮುಸಲ್ಮಾನರು ಎಂದು ತಿಳಿದು ಬಂದಲ್ಲಿ ಅವರನ್ನು ಕೂಡಲೇ ಬಂಧಿಸಿ ದೇಶದ್ರೋಹದ ಕೇಸ್ ದಾಖಲಿಸಬೇಕು ಹಾಗೂ ಸೂಕ್ತ ವ್ಯವಸ್ಥೆಯೊಂದಿಗೆ ಭಾರತದ ಗಡಿಯಿಂದ ಬಾಂಗ್ಲಾದೇಶಕ್ಕೆ ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ

ಈ ಸಂದರ್ಭದಲ್ಲಿ ಬಜರಂಗ ದಳದ ತಾಲ್ಲೂಕು ಸಂಚಾಲಕ ವಿನಯ್ ಶೆಟ್ಟಿ
ಸುರಕ್ಷಾ ಪ್ರಮುಖ್ ಸಂತೋಷ್
ನಗರ ಪ್ರಮುಖ ಮಧುಗೌಡ ಬಣಕಲ್ ಹೋಬಳಿ ಸಂಚಾಲಕ ಅಭಿಷೇಕ್ ಪ್ರಣೀತ್ ಹಾಗೂ ಮುಂತಾದವರಿದ್ದರು